ಬೆಂಗಳೂರು: ಮಹಾತ್ಮಗಾಂಧಿ ರಸ್ತೆಯ ಮಾಲ್‌ವೊಂದರ ಬಳಿ ಕ್ಯಾಬ್‌ಗ ಕಾಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬ್ಯಾಗ್ ಕಳವು ಮಾಡಿದ್ದಲ್ಲದೇ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಯುವತಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದ್ದು, ಹಲಸೂರು ಠಾಣೆಗೆ ದೂರು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಆದರೆ, ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಠಾಣೆಯ ಹಿರಿಯ ಅಧಿಕಾರಿಗಳು, “ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಯುವತಿ ದೂರು ನೀಡಿಲ್ಲ. ದೌರ್ಜನ್ಯದ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಯುವತಿಯನ್ನು ಸಂಪರ್ಕಿಸಲಾಯಿತು. ಆದರೆ ಯುವತಿ ಘಟನೆ ನಡೆದಿಲ್ಲ ಎಂದಿದ್ದಾರೆ. ಆ ರೀತಿ ಬರೆದುಕೊಂಡಿಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ, ಹಾಗೇನಾದರೂ ಸ್ಟೇಟಸ್ ಇದ್ದರೆ ಕೂಡಲೇ ಡಿಲಿಟ್ ಮಾಡುವುದಾಗಿ ಹೇಳಿದ್ದಾರೆ,” ಎಂದು ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲೇನಿದೆ?: ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಎಂ.ಜಿ.ರಸ್ತೆಯ ದಿ ಟೋ ಟೆರಸ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮುಗಿಸಿ ಮನೆಗೆ ಹೋಗಲು ಉಬರ್ ಕ್ಯಾಬ್ ಬುಕ್ ಮಾಡಿ ಹೊರಗಡೆ ಕಾಯುತ್ತಿದ್ದೆವು. ಈ ವೇಳೆ ಏಕಾಏಕಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನನ್ನ ಬ್ಯಾಗ್ ಕಸಿಯಲು ಯತ್ನಿಸಿದ್ದರು.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದೆ. ಬಳಿಕ ಮತ್ತೂಮ್ಮೆ ಬಂದ ಆರೋಪಿಗಳು ನನ್ನನ್ನು ಎಳೆದಾಡಿ ಕೆಳಗೆ ಬೀಳಿಸಿದರು. ನಂತರ ನನ್ನ ಬ್ಯಾಗ್ ಕಸಿದು ಪರಾರಿಯಾದರು. ಆ ಬ್ಯಾಗ್‌ನಲ್ಲಿ ಐಫೋನ್ 7, ಎಟಿಎಂ ಕಾರ್ಡ ಸೇರಿದಂತೆ ಪ್ರಮುಖ ದಾಖಲೆಗಳಿದ್ದವು. ಈ ವೇಳೆ ನನ್ನ ಮೇಲ್ಭಾಗದ ಬಟ್ಟೆ ಹರಿಯಿತು.
ಈ ಸಂಬಂಧ ಕೂಡಲೇ ಹಲಸೂರು ಠಾಣೆಗೆ ದೂರು ನೀಡಿದ್ದೇವೆ. ಬೆಂಗಳೂರು ಎಂದರೆ ತುಂಬ ರಕ್ಷಣೆಯುಳ್ಳ ಸ್ಥಳ ಎಂಬ ಭಾವನೆ ಇತ್ತು. ಆದರೆ, ಈ ರೀತಿ ದೌರ್ಜನ್ಯವಾಗಿದ್ದು ಭಯ ಉಂಟು ಮಾಡಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ, ನನ್ನ ದಾಖಲೆಗಳನ್ನು ಹಿಂದಿರುಗಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಬರೆದುಕೊಂಡಿದ್ದಾರೆ.