Advertisement

Baramulla ಉಗ್ರನ ಹತ್ಯೆ ಡ್ರೋನ್‌ ವೀಡಿಯೋ ವೈರಲ್‌

12:12 AM Sep 17, 2024 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯನ್ನು ಡ್ರೋನ್‌ ಕೆಮರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವೀಡಿಯೋ ಬಿಡುಗಡೆಯಾಗಿದೆ.

Advertisement

ಉಗ್ರನೊಬ್ಬ ತಪ್ಪಿಸಿಕೊಳ್ಳಲು ಓಡು­ತ್ತಿರುವುದು ಮತ್ತು ಸೇನಾಪಡೆಗಳು ಆತನನ್ನು ಹತ್ಯೆ ಮಾಡಿರುವುದು ವಿಡಿ­ಯೋದಲ್ಲಿ ದಾಖಲಾಗಿದೆ. ಶನಿವಾರ ಬಾರಾಮುಲ್ಲಾದಲ್ಲಿ ನಡೆದ ಕಾರ್ಯಾಚರ­ಣೆಯ ವೀಡಿಯೋ ಇದಾಗಿದ್ದು, ಉಗ್ರ­ನೊಬ್ಬ ಕಟ್ಟಡವೊಂದರಿಂದ ಹೊರಗೆ ಓಡಿಬಂದು ತಪ್ಪಿಸಿಕೊಳ್ಳಲು ದಾರಿ ಹುಡು­ಕುತ್ತಾ, ಸೇನಾಪಡೆಗಳೆಡೆಗೆ ದಾಳಿ ನಡೆಸಿದ್ದಾನೆ. ಸೇನಾಪಡೆಯ ಗುಂಡು ತಗಲಿ ಕೆಳಗೆ ಬೀಳುವ ಆತ, ಒಂದಷ್ಟು ದೂರ ತೆವಳಿ ಮತ್ತೆ ಓಡಲು ಯತ್ನಿಸಿದ್ದಾನೆ. ಈ ವೇಳೆ ಸತತವಾಗಿ ಗುಂಡು ಹಾರಿಸಿದ ಸೇನಾಪಡೆಗಳು ಆತನನ್ನು ಹತ್ಯೆ ಮಾಡಿರುವುದು ವೀಡಿಯೋದಲ್ಲಿ ದಾಖಲಾಗಿದೆ.ಇದೇ ಮೊದಲ ಬಾರಿಗೆ ಉಗ್ರ ನೊಬ್ಬನ ಹತ್ಯೆಯನ್ನು ಡ್ರೋನ್‌ ಮೂಲಕ ಚಿತ್ರೀಕರಣ ನಡೆಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next