Advertisement

ಬಾರಕೂರು: ಚಿನ್ನಾಭರಣ ಕಳವು

08:00 PM Apr 23, 2023 | Team Udayavani |

ಬ್ರಹ್ಮಾವರ: ಬಾರಕೂರು ಮಸ್ಕಿಬೈಲಿನ ಮನೆಯಲ್ಲಿ ಎ.12ರಿಂದ 22ರ ನಡುವಿನ ಅವಧಿಯಲ್ಲಿ ಚಿನ್ನಾಭರಣ ಕಳವು ನಡೆದಿದೆ.
ಮನೆಯವರು ಗೋವಾಕ್ಕೆ ತೆರಳಿದ್ದ ಸಂದರ್ಭ ಕಳ್ಳರು ಬೆಡ್‌ರೂಂನ ಬೀರುವಿನಲ್ಲಿದ್ದ 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 35,000 ರೂ. ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಕಳವುಗೈದಿದ್ದಾರೆ.

Advertisement

ಈ ಕುರಿತು ಮಧುಶ್ರೀ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next