Advertisement

ಬಾರಕೂರು ಶ್ರೀ ಕಾಳಿಕಾಂಬಾ ದೇಗುಲ: ಅಷ್ಠಬಂಧ ಬ್ರಹ್ಮಕಲಶೋತ್ಸವ

11:41 AM Feb 17, 2021 | Team Udayavani |

ತೆಕ್ಕಟ್ಟೆ: ಕರಾವಳಿ  ಕರ್ನಾಟಕದ ವಿಶ್ವಬ್ರಾಹ್ಮಣರ  ಮೂಲ ಆರಾಧನಾ ಕೇಂದ್ರವಾದ ಬಾರಕೂರು  ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ  ಗರ್ಭಗುಡಿ ಹಾಗೂ ತೀರ್ಥ ಮಂಟಪದ ನವೀಕರಣದ ಅಂಗವಾಗಿ  ಆನೆಗೊಂದಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ  ದಿವ್ಯ ಕರಕಮಲಗಳಿಂದ ಜಗನ್ಮಾತೆ ಶ್ರೀ ಕಾಳಿಕಾಂಬಾ ದೇವಿಗೆ  ಬ್ರಹ್ಮಕಲಶಾಭಿಷೇಕವು ಕ್ಷೇತ್ರದ ತಂತ್ರಿಗಳಾದ ಶ್ರೀ ಲಕ್ಷ್ಮೀಕಾಂತ್‌ ಶರ್ಮ ಅವರ ನೇತೃತ್ವದಲ್ಲಿ ಫೆ.17 ರಂದು ಜರಗಿತು.

Advertisement

ಈ ಸಂದರ್ಭದಲ್ಲಿ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಧರ್ಮದರ್ಶಿ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ , ಎರಡನೆಯ ಆಡಳಿತ ಮೊಕ್ತೇಸರ ಪ್ರವೀಣ್‌ ಆಚಾರ್ಯ, 3ನೇ ಆಡಳಿತ ಮೊಕ್ತೇಸರ ರವಿ ಆರ್‌.ಆಚಾರ್ಯ ಕೆಳಾರ್ಕಳಬೆಟ್ಟು, ಎನ್‌.ಪ್ರಕಾಶ್‌ ಆಚಾರ್ಯ, ಚಂದ್ರಶೇಖರ್‌ ಆಚಾರ್ಯ ಕೋಟ, ನಾಗರಾಜ ಆಚಾರ್ಯ ಕೂರಾಡಿ, ಜಿ.ಎಸ್‌.ಚಂದ್ರ ಆಚಾರ್ಯ ಗೋಳಿಯಂಗಡಿ, ಅರವಿಂದ ಆಚಾರ್ಯ ಬೆಳ್ಳಂಪಳ್ಳಿ, ಸೌಮ್ಯ ಸುರೇಶ್‌ ಆಚಾರ್ಯ ಬೆಳ್ಳಂಪಳ್ಳಿ, ಹಾಗೂ  ಆಡಳಿತ ಮಂಡಳಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next