ಬರಗೂರು: ಬರಗೂರು ಮಾರ್ಗವಾಗಿ ಮದಲೂರು ವರೆಗಿನ ಡಾಂಬರೀಕರಣ ರಸ್ತೆ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲದಿರುವುದು ನಮ್ಮ ಗಮನಕ್ಕೆ ಬಂದಿದ್ದು ಇನ್ನು ನಾಲ್ಕೆçದು ದಿನಗಳಲ್ಲಿ ಕೆಲಸ ಪ್ರಾರಂಭಿಸಿ ತುರ್ತಾಗಿ ಕಾಮಗಾರಿ ಮುಗಿಸುವಂತೆ ಬೆಂಗಳೂರು ಎಸ್‌ಎಸ್‌ಡಿಪಿ ಚೀಫ್ ಎಂಜಿನಿಯರ್ ವೀರಭದ್ರಪ್ಪ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಶಿರಾ ತಾಲೂಕು ಬರಗೂರಿನಿಂದ ಮದಲೂರು ಮಾರ್ಗವಾಗಿ ಕೈಗೊಂಡಿರುವ ಸುಮಾರು 17.7 ಕೋಟಿ ರೂ. ವೆಚ್ಚದ ಕಾಮಗಾರಿ ಕುಂಟಿತಗೊಂಡು ಸಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ರಸ್ತೆ ಕಾಮಗಾರಿ ಕುಂಟಿತಗೊಂಡಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.
ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ಕನ್ನಡ ಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ದೂರವಾಣಿ ಕರೆ ಮಾಡಿ ದೂರು ನೀಡಿರುವುದು ನಮ್ಮ ಗಮನಕ್ಕೆ ಬಂದ ಕಾರಣ ರಸ್ತೆ ಕಾಮಗಾರಿ ಸ್ಥಳ ಪರಿಶೀಲಿಸಿಲಾಗಿದೆ.
2020ರ ಜನವರಿ ಯಲ್ಲಿ ಈ ಕಾಮಗಾರಿ ಪ್ರಾರಂಭವಾಗಿತ್ತು. ಕೊರೊನಾ ಸೇರಿದಂತೆ ಹಲವು ಸಮಸ್ಯೆ ಗಳಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಕುಂಟಿತಗೊಂಡಿದೆ. ರಸ್ತೆ ಕಾಮಗಾರಿಯಲ್ಲಿ ಇನ್ನೂ ಹಲವು ಲೋಪಗಳಿದ್ದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭಿಸಿ ಕಾಮಗಾರಿ ತುರ್ತಾಗಿ ಪೂರ್ಣಗೊಳಿ ಸಲಾಗುವುದೆಂದು ತಿಳಿಸಿದರು.
ಇದನ್ನೂ ಓದಿ:ಸುರಕ್ಷತೆಗಾಗಿ ಹೆಲ್ಮೆಟ್‌ಕಡ್ಡಾಯ: ಶಿವಮೂರ್ತಿ
ಬೆಂಗಳೂರು ಎಸ್‌ಎಸ್‌ಡಿಪಿ ಸಹಾಯಕ ಎಂಜಿನಿಯರ್ ಶ್ರೀನಿವಾಸ್, ಮಧುಗಿರಿ ಲೋಕೋಪ ಯೋಗಿ ಇಲಾಖೆ ಎಂಜಿನಿಯರ್ ಪ್ರಕಾಶ್, ಶಿರಾ ಲೋಕೋಪಯೋಗಿ ಇಲಾಖೆ ಉಪವಿಭಾಗದ ಎಇಇ ಮಲ್ಲೇಶ್, ಸಹಾಯಕ ಎಂಜಿನಿಯರ್ ಗೋವಿಂದಪ್ಪ, ಸ್ವಾಮಿ ನಾಯಕ್, ಗುತ್ತಿಗೆದಾರ ಪರವಾಗಿ ಸಂತೋಷ್ ಇತರರು ಇದ್ದರು