Advertisement

ಭರಚುಕ್ಕಿ ಜಲಪಾತಕ್ಕೆ ಪ್ರವಾಸಿಗರ ದಂಡು

12:56 PM Aug 17, 2020 | Suhan S |

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರದ ಸಮೀಪವಿರುವ ಭರಚುಕ್ಕಿ ಜಲಪಾತ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ದಂಡು ಭಾನುವಾರ ಆಗಮಿಸಿ ರಮಣೀಯವಾಗಿ ಹರಿಯುತ್ತಿರುವುದನ್ನು ನೋಡಿ ಕಣ್ತುಂಬಿಕೊಂಡರು.

Advertisement

ರಾಜ್ಯದ ವಿವಿಧ ಜಿಲ್ಲೆ ಮತ್ತು ನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಪ್ರವಾಸಿಗರ ದಂಡು ಆಗಮಿಸಿ, ಜಲಪಾತವೀಕ್ಷಿಸಿ ಮೊಬೈಲ್‌ಗಳಲ್ಲಿ ಫೋಟೊ ತೆಗೆದು, ಸೆಲ್ಪಿ ತೆಗೆದುಕೊಂಡು ಸಂಭ್ರಮಪಟ್ಟರು. ದೇಶದಲ್ಲಿ ಕೋವಿಡ್ ಮಿತಿ ಮೀರಿದ್ದು, ಇದರ ನಡುವೆಯೂ ಪ್ರವಾಸಿಗರು ಸಾಗರೋ ಪಾದಿಯಲ್ಲಿ ಹರಿದು ಬಂದು ಸಾಮಾಜಿಕ ಅಂತರ ಲೆಕ್ಕಿಸದೆ ಜಮಾವಣೆಗೊಂಡು ವೀಕ್ಷಣೆ ಮಾಡಿದರು.

ಸಂದು ಭೇಟಿ: ರಾಜ್ಯ ಸಿಐಡಿ ಪೊಲೀಸ್‌ ಮಹಾನಿದೇರ್ಶಕ ಸಂದುರವರು, ತಮ್ಮ ಕುಟುಂಬ ಸಮೇತ ಜಲಪಾತಕ್ಕೆ ಆಗಮಿಸಿ ವೀಕ್ಷಣೆ ಬಳಿಕ ಬೆಂಗಳೂರಿನತ್ತ ವಾಪಾಸು ತೆರಳಿದರು.

ವಾಹನ: ಜಲಪಾತ ವೀಕ್ಷಣೆಗೆಂದು ಪ್ರವಾಸಿಗರು ಕಾರು, ಬೈಕ್‌ ಹಾಗೂ ಇನ್ನಿತರ ವಾಹನಗಳಲ್ಲಿ ಆಗಮಿಸಿದ್ದ ರಿಂದ ಅಲ್ಲಲ್ಲಿ ವಾಹನಗಳ ಸಂಚಾರ ಜಮಾವಣೆಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಂಡರು. ಸರಾಗ ಸಂಚಾರಕ್ಕೆ ಮಾರ್ಗಗಳನ್ನು ದೊರಕಿಸಿಕೊಟ್ಟರು. ಚೆಂಡು ಹೂ ಜಮೀನಿಗೆ ಲಗ್ಗೆ: ಭರಚುಕ್ಕಿ ಜಲ ಪಾತದ ಸಮೀಪದ ಜಮೀನೊಂದರಲ್ಲಿ ಚೆಂಡು ಹೂ ಬೆಳೆದಿದ್ದನ್ನು ಕಂಡ ಪ್ರವಾಸಿಗರು ಜಮೀನಿನ ಮಧ್ಯದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next