Advertisement
ಕಳೆದ ವರ್ಷಕ್ಕಿಂದ ಪಟ್ಟೆತಲೆಯ ಹೆಬ್ಬಾತುಗಳ ಸಂಖ್ಯೆ ಹೆಚ್ಚಿದ್ದು, ಕೆರೆಯಲ್ಲಿ ಬೀಡು ಬಿಟ್ಟಿವೆ. ಸದ್ಯ ಹಿಂಗಾರು ಹಂಗಾಮಿನ ಸುಗ್ಗಿ ಕಾಲವಾಗಿದ್ದರಿಂದ ಈ ಪಕ್ಷಿಗಳು ಬೆಳಗ್ಗೆ ಕೆರೆಯಲ್ಲಿ ವಿಹರಿಸುತ್ತಿದ್ದು, ಈ ಪಕ್ಷಿ ನೀರಿನಲ್ಲಿದ್ದರೂ ಸಂಪೂರ್ಣ ಸಸ್ಯಹಾರಿಯಾಗಿದೆ. ಇದು ನೀರಿನಲ್ಲಿ ಕಪ್ಪೆ, ಮೀನು, ಏಡಿ ತಿನ್ನುವುದಿಲ್ಲ. ಅಹಾರಕ್ಕಾಗಿ ಜೋಳ, ಕಡಲೆ, ಶೇಂಗಾ, ಗೋಧಿ ಕಾಳುಗಳಿಗೆ ರೈತರ ಹೊಲಕ್ಕೆ ಲಗ್ಗೆ ಇಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಪುನಃ ಕೆರೆಯ ದಡ ಸೇರಿಕೊಳ್ಳುತ್ತಿವೆ. ಸುರಕ್ಷಿತವಾಗಿದ್ದರೆ ಅಲ್ಲಿಯೇ ವಿಹರಿಸುವ ಪಟ್ಟೆತಲೆಯ ಹೆಬ್ಬಾತುಗಳು ಅಪಾಯ ಕಂಡು ಬಂದರೆ ಅಲ್ಲಿಂದ ಜಾಗ ಖಾಲಿಮಾಡುತ್ತವೆ ಅಷ್ಟೊಂದು ಸೂಕ್ಷ್ಮಗ್ರಹಿ ಪಕ್ಷಿಗಳಾಗಿವೆ.
Related Articles
Advertisement
ಮಂಗೋಲಿಯನ್ ಮೂಲದ ಹಕ್ಕಿ ಹಿಮಾಲಯ ದಾಟಿ ಈ ಪ್ರದೇಶಕ್ಕೆ ವಲಸೆ ಬರುವ ಪಟ್ಟೆತಲೆಯ ಹೆಬ್ಬಾತುಗಳು, ಗದಗ ಜಿಲ್ಲೆಯ ಮಾಗಡಿ ಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿವೆ. ಇಲ್ಲಿಗೆ ಬರುವ ಹಕ್ಕಿಗಳ ಸಮೂಹ ನಿಡಶೇಸಿ ಕೆರೆಗೆ ಆಗಮಿಸಿದ್ದು ಶಬ್ದ ಮಾಲಿನ್ಯ, ಕಲುಷಿತ ನೀರಿನಿಂದ ವಿಮುಖವಾಗುವ ಹಕ್ಕಿಗಳಾಗಿವೆ. ಈ ಪ್ರದೇಶ ಸುರಕ್ಷಿತವೆನಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿಗಳು ಆಗಮಿಸುವ ಸಾದ್ಯತೆ ಇದೆ.– ಅಮೀನ್ ಅತ್ತಾರ ವನ್ಯಜೀವಿ ಛಾಯಾಗ್ರಾಹಕರು, ಸಿಎಓ ಜಿ.ಪಂ. ಇಲಾಖೆ ಕೊಪ್ಪಳ. – ಮಂಜುನಾಥ ಮಹಾಲಿಂಗಪುರ ಕುಷ್ಟಗಿ