Advertisement
ರವಿವಾರ ಮುಂಜಾನೆ ಜಳಕದ ಬಲಿ ಉತ್ಸವ ನಡೆಯಿತು.ಅನಂತರ ಧ್ವಜಾವರೋಹಣ ಜರಗಿತು. ಮುಂಜಾನೆಯಿಂದಲೇ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಹಣ್ಣುಕಾಯಿ ಸೇವೆ ಸಮರ್ಪಿಸಿದರು. ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಮಹಾ ಫಲ ಮಂತ್ರಾಕ್ಷತೆ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ದೇಗುಲದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪುತ್ತೂರು ಮಧುಸೂಧನ ತಂತ್ರಿಗಳ ಉಪಸ್ಥಿತಿ ಹಾಗೂ ಅರ್ಚಕರಾದ ಬಿ. ಕೃಷ್ಣದಾಸ್ ಭಟ್ ಮತ್ತು ಶ್ರೀಪತಿ ಉಪಾಧ್ಯಾಯ, ಆಡಳಿತ ಸಮಿತಿಯ ಅಧ್ಯಕ್ಷ ಎನ್.ಎಸ್.ಮನೋಹರ ಶೆಟ್ಟಿ, ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಪ್ಪನಾಡು ನಾರಾಯಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವದ ಅನಂತರ ಜರಗುವ ಧೃಢ ಕಲಶ ಮೇ 6 ಮತ್ತು 7ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.