Advertisement

ಬಪ್ಪನಾಡು ಅಪಘಾತ: ಗಾಯಾಳು ಮಹಿಳೆ ಇನ್ನೂ ತೀವ್ರ ನಿಗಾದಲ್ಲಿ

09:06 AM May 22, 2018 | Team Udayavani |

ಮೂಲ್ಕಿ: ರವಿವಾರ ರಾತ್ರಿ  ಬಪ್ಪನಾಡಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬಸ್‌ ನಡುವೆ  ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮಹಿಳೆ ತೀವ್ರ ನಿಗಾ ಘಟಕದಲ್ಲಿದ್ದು, ಆಕೆಯ ಪುತ್ರಿಯನ್ನು ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿದೆ.

Advertisement

ಘಟನೆಯಲ್ಲಿ ಮೃತಪಟ್ಟ ಬಾಲಕ ಮೂಲ್ಕಿ ಮೆಡಲಿನ್‌ ಶಾಲೆಯ ವಿದ್ಯಾರ್ಥಿ ರಕ್ಷಿತ್‌ ಕುಮಾರ್‌(12)ನ ಮೃತದೇಹವನ್ನು ಸೋಮವಾರ ಸಂಜೆ ಅವರು ವಾಸವಿದ್ದ ವೆಂಕಟಗಿರಿ ಅಪಾರ್ಟ್‌ಮೆಂಟ್‌ನ ಕ್ವಾರ್ಟರ್ಸ್‌ ಗೆ ತಂದು ಬಳಿಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಅಂತ್ಯ ಕ್ರಿಯೆ ನಡೆಸಲಾಯಿತು.

ಈ ಬಾಲಕ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಥಳೀಯರು ಆತನ ಚಿಕಿತ್ಸೆಗೆ ಸಹಕರಿಸುತ್ತಿದ್ದರು. ಪರಿಸರದಲ್ಲಿ ಉತ್ತಮ ನಂಬಿಕಸ್ಥ ಎಂದು ಹೆಸರು ಪಡೆದಿದ್ದ ಆತನ ತಂದೆ ಮುತ್ತು ಬಗ್ಗೆ ಜನರು ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ನಿನ್ನೆಯಷ್ಟೆ ಆತನ ಪಠ್ಯ ಪುಸ್ತಕಗಳನ್ನು ಖರೀದಿಸಿ ಊರಿಗೆ ಹೋಗಿ ಬರುವುದಕ್ಕಾಗಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ಅಪಘಾತದ ರೂಪದಲ್ಲಿ ಸಾವು ಎದುರಾಗಿತ್ತು.

ಗಂಭೀರ ಗಾಯಗೊಂಡಿರುವ ಆತನ ತಾಯಿ ಶಾಂತ ಅವರ ಎರಡು ಕಾಲುಗಳು ಮುರಿತಕ್ಕೊಳಗಾಗಿದ್ದು, ಶಸ್ತ್ರಕ್ರಿಯೆ ನಡೆಸಲು ತಯಾರಿ ಮಾಡಲಾಗುತ್ತಿದೆ. ಬಾಲಕಿ ವಿಶಾಲಾಕ್ಷಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿದೆ. 
ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯ ಈ ಕುಟುಂಬ ಒಂದು ವಾರದ ಮಟ್ಟಿಗೆ ಊರಿಗೆ ಹೋಗಿ ಬರಲು ನಿರ್ಧರಿಸಿದ್ದರು. 

ಬಸ್ಸಿಗೆ ನೇರ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದ
ಮಿನಿಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವುದಕ್ಕಾಗಿ ಮರಳು ತುಂಬಿದ್ದ ಲಾರಿ ಚಾಲಕ ರಸ್ತೆ ಬದಿಗೆ ಸರಿಸಿದ್ದರಿಂದ ಬಾಲಕನ ಮೇಲೆ ಚಲಿಸುವಂತಾಯಿತು. ಬಸ್ಸಿನಲ್ಲಿ ಸುಮಾರು 15  ಪ್ರಯಾಣಿಕರಿದ್ದರು. ಒಂದೊಮ್ಮೆ ನೇರವಾಗಿ ಬಸ್ಸಿಗೆ ಢಿಕ್ಕಿ ಹೊಡೆಯುತ್ತಿದ್ದರೆ  ಹೆಚ್ಚಿನ ಸಾವುನೋವು ಸಂಭವಿಸುತ್ತಿತ್ತು.

Advertisement

ಗಾಯಗೊಂಡಿರುವ  ಬಸ್ಸಿನ ಚಾಲಕ ಮತ್ತು ಇತರ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ.  ಕೇರಳ ಮೂಲಕ ಈ ತಂಡ ಮಂಗಳೂರಿನಿಂದ ಟೆಂಪೋ ಮೂಲಕ  ದೇವಸ್ಥಾನ ಸಂದರ್ಶಿಸಲು ಬರುತ್ತಿತ್ತು.

6 ಗಂಟೆಯ ಬಸ್ಸಿಗೆ ಹೋಗುವವರಿದ್ದರು
ಸಂಜೆ ಗಂಟೆ ಸುಮಾರಿಗೆ ಬರಬೇಕಾಗಿದ್ದ ಬಸ್ಸು ಬಾರದೆ ಇದ್ದ ಕಾರಣ ಇವರು 8 ಗಂಟೆಯ ಬಸ್ಸಿಗಾಗಿ ಕಾಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next