Advertisement

Bantwal ನಾಪತ್ತೆಯಾಗಿದ್ದ ಕೋಣಗಳು ಪತ್ತೆ

01:15 AM Dec 23, 2023 | Team Udayavani |

ಬಂಟ್ವಾಳ: ಅಮ್ಮುಂಜೆಯ ದೇವಂದಬೆಟ್ಟುನಲ್ಲಿ ಮನೆಯೊಂದರ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಿದ್ದ 3 ಕೋಣಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಎರಡು ಕೋಣಗಳು ಗುಡ್ಡದಲ್ಲಿ ಪತ್ತೆಯಾಗಿದ್ದು,  ಮತ್ತೊಂದು ಕೋಣ ಕೆಸರಿನಲ್ಲಿ ಹೂತು ಹೆಣವಾಗಿ ಪತ್ತೆಯಾಗಿದೆ.

Advertisement

ದೇವಂದಬೆಟ್ಟು ನಿವಾಸಿ ವಿನಯ ಬಲ್ಯಾಯ ಅವರು ಕೋಣಗಳನ್ನು ಮನೆಯ ಸಮೀಪದ ಗದ್ದೆಯಲ್ಲಿ ಡಿ. 17ರ ಬೆಳಗ್ಗೆ ಮೇಯಲು ಕಟ್ಟಿ ಹಾಕಿದ್ದು, ಸಂಜೆ ಹೋಗಿ ನೋಡಿದಾಗ ಕೋಣಗಳು ಅಲ್ಲಿರಲಿಲ್ಲ. ಸುತ್ತಮುತ್ತಲು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದರು.

ಡಿ. 21ರಂದು 2 ಕೋಣಗಳು ಗುಡ್ಡದಲ್ಲಿ ಮೇಯುತ್ತಿದ್ದು, ಮತ್ತೊಂದು ಕೋಣ ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಹೂತು ಸತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೋಣದ ಯಜಮಾನರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next