Advertisement

ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು, ಗಂಭೀರಗಾಯಗೊಂಡ ವ್ಯಕ್ತಿ ಸಾವು

12:40 PM Apr 01, 2023 | Team Udayavani |

ಬಂಟ್ವಾಳ: ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದ ಗಂಭೀರವಾಗಿವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸೋರ್ನಾಡು ಎಂಬಲ್ಲಿ ನಡೆದಿದೆ.

Advertisement

ಜಕ್ರಿಬೆಟ್ಟು ಪಲ್ಲಿಕಂಡ ನಿವಾಸಿ ಪ್ರಸಿಲ್ಲಾ ವೇಗಸ್ ಅವರ ಪತಿ ರಾಬರ್ಟ್ ವೇಗಸ್ (51) ಮೃತಪಟ್ಟ ವ್ಯಕ್ತಿ.

ವಿಜಯ್ ಎಂಬ ಪೇಂಟಿಂಗ್ ಗುತ್ತಿಗೆದಾರನ ಜೊತೆ ರಾಬರ್ಟ್‌ ವೇಗಸ್ ಅವರು ಪೇಂಟಿಂಗ್ ಕೆಲಸಕ್ಕೆ ಇದ್ದು, ಸೋರ್ನಾಡು ಎಂಬಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಸುಮಾರು 1 ಗಂಟೆ ವೇಳೆಗೆ ಆಕಸ್ಮಿಕವಾಗಿ ಮೇಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಇವರನ್ನು ಚಿಕಿತ್ಸೆ ಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಗಂಭೀರವಾಗಿ ಗಾಯಗೊಂಡ ರಾಬರ್ಟ್ ಅವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.

Advertisement

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next