Advertisement

Bantwal: ಮಲಗಿದ ಸ್ಥಿತಿಯಲ್ಲೇ ವ್ಯಕ್ತಿ ಸಾವು

11:23 PM Jul 19, 2023 | Team Udayavani |

ಬಂಟ್ವಾಳ: ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿ ಅಲೆಯುತ್ತಿದ್ದ ವ್ಯಕ್ತಿಯೋರ್ವ ಬಂಟ್ವಾಳದ ಬಡ್ಡಕಟ್ಟೆಯ ರಸ್ತೆ ಬದಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಜು. 18ರಂದು ಬೆಳಕಿಗೆ ಬಂದಿದೆ.

Advertisement

ಬಾಳ್ತಿಲ ಗ್ರಾಮದ ಸಣ್ಣಕುಕ್ಕು ನಿವಾಸಿ ರವೀಂದ್ರ ಪೂಜಾರಿ (40) ಮೃತಪಟ್ಟ ವ್ಯಕ್ತಿ. ಈತ ಅಮಲು ಪದಾರ್ಥ ಸೇವನೆಯ ಚಟ ಹೊಂದಿ ಮನೆಗೆ ಬಾರದೆ ಬಡ್ಡಕಟ್ಟೆ ಪರಿಸರದಲ್ಲೇ ಸುತ್ತಾಡಿಕೊಂಡಿದ್ದು, ರಸ್ತೆ ಬದಿಯಲ್ಲೇ ಮಲಗಿರುತ್ತಿದ್ದ.

ಅದೇ ರೀತಿ ಜು. 17ರಂದು ಕೂಡ ಅಮಲು ಪದಾರ್ಥ ಸೇವಿಸಿ ರಸ್ತೆ ಬದಿ ಮಲಗಿದ್ದು, ಜು. 18ರ ಬೆಳಗ್ಗೆ ಮೃತಪಟ್ಟಿದ್ದಾನೆ.

ಘಟನೆಯ ಕುರಿತು ಮೃತ ವ್ಯಕ್ತಿಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next