Advertisement

Bantwala: ಲೈಂಗಿಕ ಕಿರುಕುಳ: ಪೋಕ್ಸೊ ಪ್ರಕರಣ ದಾಖಲು

09:10 PM Jul 09, 2024 | Team Udayavani |

ಬಂಟ್ವಾಳ: ಬಿ.ಮೂಡ ಗ್ರಾಮದಲ್ಲಿ ಟೈಲರ್‌ವೊಬ್ಬ ತನ್ನ ಅಂಗಡಿಗೆ ಬಂದ 6ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

Advertisement

ಟೈಲರ್‌ ವೃತ್ತಿ ನಿರ್ವಹಿಸುತ್ತಿರುವ ಧರ್ಮರಾಜ್‌ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಜು. 8ರಂದು ಸಂಜೆ 4.30ರ ಸುಮಾರಿಗೆ ಬಾಲಕಿ ಆತನ ಅಂಗಡಿಗೆ ಬಂದ ಸಂದರ್ಭ ಕೈ ಹಿಡಿದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next