Advertisement
ಹೆದ್ದಾರಿ ಅಭಿವೃದ್ಧಿಯ ವೇಳೆ ವಿಸ್ತರಣೆಗೆ ಹತ್ತಾರು ಅಡಿ ಎತ್ತರದ ಗುಡ್ಡ ಗಳನ್ನು ನೇರವಾಗಿ ತೆಗೆದ ಪರಿಣಾಮ ಪ್ರಸ್ತುತ ಮಳೆಗಾಲದಲ್ಲಿ ಮಣ್ಣು ಹದ ಗೊಂಡು ಗುಡ್ಡವು ಹೆದ್ದಾರಿಗೆ ಬೀಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದರ ಜತೆಗೆ ಮರಗಳು ಗುಡ್ಡದ ಮೇಲಿದ್ದು, ಕುಸಿಯುವ ಸಂದರ್ಭ ಅವುಗಳು ಹೆದ್ದಾರಿಗೆ ಬಿದ್ದು, ಜೀವಹಾನಿ ಸಂಭವಿಸುವ ಆತಂಕವೂ ಇದೆ.
Related Articles
Advertisement
ಆದರೆ ಗುಡ್ಡ ತೆರವಿಗೆ ಸಂಬಂಧಿಸಿ ದಂತೆ ಹೆಚ್ಚುವರಿ ಅನುದಾನ ಲಭ್ಯವಾಗಬೇಕಿರು ವುದರಿಂದ ಅದರ ಕುರಿತು ಯಾವುದೇ ಮಾಹಿತಿ ಇಲ್ಲವಾಗಿದೆ. ಗುಡ್ಡ ಕುಸಿದ ಸಂದರ್ಭದಲ್ಲಿ ಹೆದ್ದಾರಿ ಇಲಾಖೆಯೇ ಮಣ್ಣು ತೆರವು ಮಾಡುತ್ತದೆಯೇ ವಿನಃ ಅಪಾಯಕಾರಿಯಾಗಿರುವ ಗುಡ್ಡಗಳ ಕುರಿತು ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.
ಇಲಾಖೆಯ ವತಿಯಿಂದ ಮಣ್ಣು ತೆರವು ಹೆಚ್ಚುವರಿ ಭೂಸ್ವಾಧೀನಕ್ಕೆ ಸಂಬಂಧಿಸಿ ಪ್ರಸ್ತುತ ಅನುಮೋದನೆ ದೊರಕಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಮೂಲಕ ಜಾಗದ ಮಾಲಕರಿಗೆ ಮೊತ್ತ ಸಂದಾಯವಾಗಲಿದೆ. ಮಳೆಗಾಲ ದಲ್ಲಿ ಮಣ್ಣು ಹದಗೊಂಡು ಗುಡ್ಡ ಕುಸಿಯುತ್ತಿದ್ದು, ಕುಸಿದ ಮಣ್ಣನ್ನು ಇಲಾಖೆಯೇ ತೆರವು ಮಾಡುತ್ತಿದೆ. -ಮಹಾಬಲ ನಾಯ್ಕ, ಎಇಇ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರು
ಮಣಿಹಳ್ಳ ಭಾಗದಲಿ ಕುಸಿತ
2020ರಿಂದಲೇ ಗುಡ್ಡ ಕುಸಿಯುತ್ತಿದ್ದು, ಬಡಗುಂಡಿ ಭಾಗದಲ್ಲಿ ಅರ್ಧಕ್ಕೆ ನಿರ್ಮಾಣಗೊಂಡಿರುವ ತಡೆಗೋಡೆಯನ್ನೂ ದೂಡುವಷ್ಟರ ಮಟ್ಟಿಗೆ ಗುಡ್ಡ ಹೆದ್ದಾರಿಗೆ ಬಾಗಿಕೊಂಡಿದೆ. ಕಳೆದ ವರ್ಷ ಈ ಭಾಗದಲ್ಲಿ ಗುಡ್ಡ ಕುಸಿದು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಇಡಲಾಗಿತ್ತು. ಜತೆಗೆ ಗುಡ್ಡದ ತಳಭಾಗದಲ್ಲಿ ಹೆದ್ದಾರಿ ಬದಿಗೆ ಹಾಕಲಾಗಿದ್ದ ವಿದ್ಯುತ್ ಕಂಬಗಳ ಮೇಲೂ ಗುಡ್ಡ ಕುಸಿದು ಹಾನಿಯಾಗಿತ್ತು. ಈ ವರ್ಷದ ಮಳೆ ಪ್ರಾರಂಭದ ಸಂದರ್ಭದಲ್ಲೇ ಮಣಿಹಳ್ಳ ಭಾಗದಲ್ಲಿ ಗುಡ್ಡ ಕುಸಿದಿದ್ದು, ಅದರ ಜತೆಗೆ ಮರಗಳು ಕೂಡ ಹೆದ್ದಾರಿಗೆ ಬಿದ್ದಿತ್ತು. ಪ್ರಸ್ತುತ ಅದನ್ನು ತೆರವು ಮಾಡಿದ್ದರೂ, ಇನ್ನೂ ಕೂಡ ಗುಡ್ಡ ಅಪಾಯದ ಸ್ಥಿತಿಯಲ್ಲೇ ಇದ್ದು, ಮತ್ತೆ ಯಾವಾಗ ಕುಸಿಯುತ್ತದೆ ಎಂದು ಹೇಳುವಂತಿಲ್ಲ.
-ಕಿರಣ್ ಸರಪಾಡಿ