Advertisement

ದ್ವಿ ಚಕ್ರವಾಹನದಲ್ಲಿ ದನದ ಮಾಂಸ ಮಾರಾಟ : ಓರ್ವನ ಬಂಧನ

07:08 PM Mar 27, 2022 | Team Udayavani |

ಬಂಟ್ವಾಳ: ದ್ವಿ ಚಕ್ರವಾಹನದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಮಾ.27 ರಂದು ಆದಿತ್ಯವಾರ ಗೂಡಿನಬಳಿಯಲ್ಲಿ ನಡೆದಿದೆ.

Advertisement

ಬೋಳಂತೂರು ನಿವಾಸಿ ಮಹಮ್ಮದ್ ಮುಸ್ತಫಾ ಬಂಧಿತ ಆರೋಪಿ.

ಆರೋಪಿಯ ದ್ವಿ ಚಕ್ರವಾಹನ ಹಾಗೂ ಅದರಲ್ಲಿ ದ್ದ 20 ಕೆ.ಜಿ‌.ಮಾಂಸವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಮಹಮ್ಮದ್ ಮುಸ್ತಫಾ ಹಾಗೂ ಸ್ನೇಹಿತ ಇಬ್ಬರು ಸೇರಿ ಅಕ್ರಮವಾಗಿ ದನಗಳನ್ನು ಕದ್ದು ತಂದು ಪ್ರತಿ ಆದಿತ್ಯವಾರ ದಿನ ಮನೆಯಲ್ಲಿ ಕಡಿದು ಮಾಂಸ ಮಾಡಿ ಬಳಿಕ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪೋಲೀಸರಿಗೆ ದೊರಕಿದೆ.

ಆರೋಪಿ ದ್ವಿ ಚಕ್ರದ ಮೂಲಕ ನಂದಾವರ, ಗೂಡಿನಬಳಿ, ಮಂಚಿ ಸಹಿತ ತಾಲೂಕಿನ ಆಯ್ದ ಕಡೆಗಳಿಗೆ ಮಾರಾಟ ಮಾಡುವುದಾಗಿ ಪೋಲೀಸರಿಗೆ ಮಾಹಿತಿ ದೊರಕಿದೆ.

Advertisement

ಇದನ್ನೂ ಓದಿ : ಮಣಿನಾಲ್ಕೂರು : ವೃದ್ಧೆಯ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ದೋಚಿದ ಕಳ್ಳರು

Advertisement

Udayavani is now on Telegram. Click here to join our channel and stay updated with the latest news.

Next