ಬಂಟ್ವಾಳ: ಮನೆಯಲ್ಲಿದ್ದ ವೃದ್ಧೆಯ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ದೋಚಿದ ಘಟನೆ ಶನಿವಾರ ರಾತ್ರಿ ಮಣಿನಾಲ್ಕೂರು ಗ್ರಾಮದ ತಾಂದಪಲ್ಕೆಯಲ್ಲಿ ನಡೆದಿದೆ.
ತಾಂದಪಲ್ಕೆ ಸೇಸಪ್ಪ ನಾಯ್ಕ್ ಅವರ ಮನೆಯಿಂದ ಕಳ್ಳತನ ನಡೆದಿದ್ದು, ಸೇಸಪ್ಪ ನಾಯ್ಕ್ ದಂಪತಿ ಮನೆಯಲ್ಲಿ ತಾಯಿಯನ್ನು ಬಿಟ್ಟು ಮನೆಗೆ ಬೀಗ ಹಾಕಿ ಸ್ಥಳೀಯ ದೇವಸ್ಥಾನವೊಂದರ ಬ್ರಹ್ಮಕಲಶದ ನಾಟಕ ನೋಡಲು ತೆರಳಿದ್ದರು.
ಈ ವೇಳೆ ಬೀಗ ಮುರಿದು ಒಳಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಅವರ ತಾಯಿ ಮುತ್ತು ಅವರ ಕೈಗಳನ್ನು ಕಟ್ಟಿ-ಬೊಬ್ಬೆ ಹಾಕದಂತೆ ಬಾಯಿಗೆ ಬಟ್ಟೆ ತುರುಕಿ ಅವರ ಕಿವಿಯಲ್ಲಿದ್ದ ಬೆಂಡೋಲೆ ತೆಗೆದು, ಜತೆಗೆ ಕಪಾಟಿನಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಉಂಗುರ ಹಾಗೂ ಪ್ಲಾಸ್ಟಿಕ್‌ನಲ್ಲಿದ್ದ ಕರಿಮಣಿ ಸರವನ್ನು ದರೋಡೆಗೈದಿದ್ದಾರೆ.
ಇದನ್ನೂ ಓದಿ : 10 ನಿಮಿಷದಲ್ಲಿ ಫುಡ್ ಡೆಲಿವರಿ: ಪೊಲೀಸರಿಗೆ ಸ್ಪಷ್ಟನೆ ನೀಡಿದ ಝೊಮ್ಯಾಟೋ
ಒಟ್ಟು 6 ಗ್ರಾಂ. ತೂಕದ ಬೆಂಡೋಲೆ, 4 ಗ್ರಾಂ. ತೂಕದ ಉಂಗುರ ಹಾಗೂ 24 ಗ್ರಾಂ. ತೂಕದ ಕರಿಮಣಿ ಸರ ದೋಚಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.