Advertisement

ಬಂಟ್ವಾಳ : ಹೊಂಡ ತಪ್ಪಿಸಲು ಹಠಾತ್‌ ಬ್ರೇಕ್‌ ! ಬಸ್ಸಿನೊಳಗಡೆ ಬಿದ್ದ ಪ್ರಯಾಣಿಕ

02:54 PM Aug 22, 2022 | Team Udayavani |

ಬಂಟ್ವಾಳ : ಹೆದ್ದಾರಿಯಲ್ಲಿನ ಹೊಂಡ ತಪ್ಪಿಸುವ ಭರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಏಕಾಏಕಿ ಬ್ರೇಕ್‌ ಹಾಕಿದ ಪರಿಣಾಮ ಪ್ರಯಾಣಿಕನೋರ್ವ ಬಸ್ಸಿನ ಒಳಭಾಗದಲ್ಲೇ ಬಿದ್ದು ಗಾಯಗೊಂಡ ಘಟನೆ ಆ. 17ರಂದು ಕಲ್ಲಡ್ಕದಲ್ಲಿ ನಡೆದಿದೆ.

Advertisement

ಪಾಣೆಮಂಗಳೂರು ಉಪ್ಪು ಗುಡ್ಡೆ ನಿವಾಸಿ ಆರ್‌. ವಿಜಯ ಕುಮಾರ್‌ ಗಾಯಗೊಂಡ ಪ್ರಯಾಣಿಕರಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಅವರು ಮಂಗಳೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಬಸ್ಸಿನ ಹಿಂಬದಿ ಸೀಟಿನಲ್ಲಿ ಮೊಬೈಲಿನಲ್ಲಿ ಮಾತನಾಡುತ್ತಾ ಕುಳಿತ್ತಿದ್ದರು. ಬಸ್ಸು ಕಲ್ಲಡ್ಕ ತಲುಪುತ್ತಿದ್ದಂತೆ ಹೆದ್ದಾರಿ ಕಾಮಗಾರಿಯ ಹೊಂಡ ತಪ್ಪಿಸುವ ಭರದಲ್ಲಿ ಚಾಲಕ ಬ್ರೇಕ್‌ ಹಾಕಿದ್ದಾರೆ. ಈ ವೇಳೆ ವಿಜಯ ಕುಮಾರ್‌ ಅವರು ಮೇಲಕ್ಕೆ ಹಾರಿ ಬಿದ್ದಿದ್ದು, ಘಟನೆಯಲ್ಲಿ ಅವರ ಸೊಂಟಕ್ಕೆ ಗಾಯವಾಗಿದೆ. ಬಸ್ಸಿನ ಚಾಲಕ ಅಬ್ದುಲ್‌ ಅವರ ವಿರುದ್ಧ ಪ್ರಯಾಣಿಕ ದೂರು ನೀಡಿದ್ದು, ದುಡುಕುತನ, ನಿರ್ಲಕ್ಷದಿಂದ ಹೀಗಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪ್ರತ್ಯೇಕ ಪ್ರಕರಣ : ಗಾಂಜಾ ಸೇವಿಸುತ್ತಿದ್ದ 9 ಮಂದಿ ಪೊಲೀಸರ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next