Advertisement

ಅಣ್ಣನಿಂದ ತಮ್ಮನ ಕೊಲೆ ಪ್ರಕರಣ : ಆರೋಪಿ ಬಂಧನ

08:19 PM Aug 08, 2021 | Team Udayavani |

ಬಂಟ್ವಾಳ:  ಪಾಣೆಮಂಗಳೂರಿನ ಬೊಂಡಾಲ ಶಾಂತಿಗುಡ್ಡೆಯಲ್ಲಿ ಅತ್ತಿಗೆಯ ಜತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪದಿಂದ ತಮ್ಮನನ್ನು ಕೊಂದ ಅಣ್ಣ ರವಿ ನಾಯ್ಕ್ ನನ್ನು ಬಂಟ್ವಾಳ ನಗರ ಪೊಲೀಸರು ಬೊಂಡಾಲದಲ್ಲಿ ಬಂಧಿಸಿದ್ದಾರೆ.

Advertisement

ಶಾಂತಿಗುಡ್ಡೆ ನಿವಾಸಿ ಸುಂದರ(30) ಕೊಲೆಯಾದ ವ್ಯಕ್ತಿ. ಆತ ಅವಿವಾಹಿತನಾಗಿದ್ದು, ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆತನ ಮನೆಯ ಸಮೀಪದಲ್ಲಿ ಅಣ್ಣನ ಮನೆಯಿದ್ದು, ಅಲ್ಲಿಂದ ಅತ್ತಿಗೆ ಊಟ- ತಿಂಡಿ‌ ನೀಡುತ್ತಿದ್ದರು.

ಸುಂದರನಿಗೂ ಆತನ ಅತ್ತಿಗೆಗೂ ಅನೈತಿಕ‌ ಸಂಬಂಧವಿದೆ ಎಂದು ಆರೋಪಿಸಿ ಆತನ ಅಣ್ಣ ರವಿಗೂ ಪದೇ ಪದೇ ಜಗಳ ನಡೆಯುತ್ತಲೇ ಇತ್ತು. ಶುಕ್ರವಾರ ತಡರಾತ್ರಿಯೂ ಅವರ ಮಧ್ಯೆ ಜಗಳ ನಡೆದಿದ್ದು, ಸುಂದರ ಬೊಬ್ಬೆ ಹೊಡೆಯುವುದನ್ನು ಕೇಳಿ ಮತ್ತೋರ್ವ ಅಣ್ಣ ರಮೇಶ ಅವರು ಹೋಗಿ ನೋಡಿದಾಗ, ರವಿಯು ಸುಂದರನಿಗೆ ಅಡಿಕೆ ಸಲಾಕೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಂಧಿತ ಆರೋಪಿಗೆ ನ್ಯಾಯಾಲಯ ಬಂಧನ ವಿಧಿಸಲಾಗಿದೆ.‌

ಇದನ್ನೂ ಓದಿ :ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

Advertisement

Udayavani is now on Telegram. Click here to join our channel and stay updated with the latest news.

Next