Advertisement

Bantwala: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಮರಿಗೆ ಉರುಳಿದ ಲಾರಿ

03:34 PM Oct 07, 2023 | Team Udayavani |

ಬಂಟ್ವಾಳ: ಅಕ್ಕಿ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಮರಿಗೆ ಉರುಳಿದ ಘಟನೆ ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿಯ ನಾವೂರಿನ ಹಂಚಿಕಟ್ಟೆ ಎಂಬಲ್ಲಿ ಅ. 7ರ ಶನಿವಾರ ನಡೆದಿದೆ.

Advertisement

ಲಾರಿಯು ಬಂಟ್ವಾಳ ಕಡೆಯಿಂದ ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದು, ಘಟನೆಯಿಂದ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next