Advertisement

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

03:29 AM Oct 23, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆಯ ಯಂತ್ರವೊಂದು ಢಿಕ್ಕಿಯಾಗಿ ಪಾದಚಾರಿ, ಬೋಳಂಗಡಿ ನಿವಾಸಿ ಪದ್ಮನಾಭ ಶೆಣೈ ಗಾಯಗೊಂಡ ಘಟನೆ ಅ. 21ರಂದು ಮೆಲ್ಕಾರಿನ ಬೋಳಂಗಡಿಯಲ್ಲಿ ಸಂಭವಿಸಿದೆ. ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕೆ.ಎನ್‌.ಆರ್‌. ಕನ್‌ಸ್ಟ್ರಕ್ಷನ್ಸ್‌ ಕಂಪೆನಿಗೆ ಸೇರಿದ ಗ್ರೈಂಡಿಂಗ್‌ ಯಂತ್ರ ಬೋಳಂಗಡಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದು, ಅದೇ ಸ್ಥಳದಲ್ಲಿ ಪದ್ಮನಾಭ ನಡೆದುಕೊಂಡು ಹೋಗುತ್ತಿದ್ದರು. ಚಾಲಕ ರಾಜಕುಮಾರ ಯಾದವ್‌ ಯಂತ್ರವನ್ನು ಏಕಾಏಕಿ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಪದ್ಮನಾಭರಿಗೆ ಢಿಕ್ಕಿ ಹೊಡೆದಿದೆ. ಘಟನೆ ಕುರಿತು ಗಾಯಾಳಿನ ಸಂಬಂಧಿ ಗುರುಪ್ರಸಾದ್‌ ನೀಡಿದ ದೂರಿನಂತೆ ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next