Advertisement

ಬಂಟ್ವಾಳ: ಪೈಪ್‌ ಒಡೆದು ನೀರು ಪೋಲು

09:10 PM May 08, 2019 | Team Udayavani |

ಬಂಟ್ವಾಳ: ಪುರಸಭಾ ವ್ಯಾಪ್ತಿಯ ನಗರ ಕೇಂದ್ರ ಬಂಟ್ವಾಳ ಪೇಟೆಯಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ನೀರು ಹರಿದು ಹೋಗುವ ಮೂಲಕ ಪೋಲಾಗುತ್ತಿದೆ. ಪುರಸಭೆಯ ಆಡಳಿತಕ್ಕೆ ಲಿಖೀತ ದೂರು ನೀಡಿದರೂ ಸ್ಪಂದನವಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಮಿತಿಯಲ್ಲಿ ನೀರು ಬಳಕೆ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಆದುದರಿಂದ ಪೈಪ್‌ ಒಡೆದು ನೀರು ಪೋಲಾಗುತ್ತಿರುವ ಬಗ್ಗೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಬಂಟ್ವಾಳ ಬೈಪಾಸ್‌, ಜಕ್ರಿಬೆಟ್ಟು ಕಡೆಗಳಲ್ಲಿ ಪೈಪ್‌ ಒಡೆದು ನೀರು ಪೋಲಾಗುತ್ತಿದೆ. ಪೈಪ್‌ ಒಡೆದ ಕಾರಣದಿಂದ ಎತ್ತರ ಪ್ರದೇಶಗಳ ಮನೆಗೆ ನೀರಿನ ಒತ್ತಡ ಕಡಿಮೆಯಾಗಿ ನೀರು ಬರುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಪೋಲಾಗುತ್ತಿರುವ ನೀರಿನ ಈ ಬಗ್ಗೆ ಗಮನಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next