Advertisement

Bantwal ತಲಪಾಡಿ: ಆಟೋ ರಿಕ್ಷಾ ಡಿವೈಡರ್‌ಗೆ ಢಿಕ್ಕಿ  

08:27 PM Oct 08, 2023 | Team Udayavani |

ಬಂಟ್ವಾಳ: ರಾ.ಹೆ.75ರ ಬಿ.ಸಿ.ರೋಡಿನ ತಲಪಾಡಿ ರೈಸ್‌ ಮಿಲ್‌ ಬಳಿ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಆಟೋ ರಿಕ್ಷಾವೊಂದು ಹೆದ್ದಾರಿಯ ಡಿವೈಡರ್‌ಗೆ ಢಿಕ್ಕಿಯಾಗಿ ಮಗುಚಿ ಬಿದ್ದ ಆಟೋದಲ್ಲಿದ್ದ ಚಾಲಕಿಯ ಪತಿ ಗಾಯಗೊಂಡ ಘಟನೆ ಅ. 6ರ ಸಂಜೆ ನಡೆದಿದೆ.

Advertisement

ಆಟೋ ಚಾಲಕಿ ಜಮೀಲಾ ಅವರ ಪತಿ ಶನವಾಝ್ ಆಲಮ್‌ ಅವರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಘಟನೆಯ ಕುರಿತು ಮೊಹಮ್ಮದ್‌ ಮುಸ್ತಾಫ ಪೊಲೀಸರಿಗೆ ದೂರು ನೀಡಿದ್ದು, ಚಾಲಕಿಯು ಆಟೋವನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾಳೆ ಎಂದು ತಿಳಿಸಿದ್ದಾರೆ.

ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next