Advertisement
ಶಿಕ್ಷಕ ರೋಶನ್ ಪಿಂಟೋ ಮಾರ್ಗದರ್ಶನಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕ ರೋಶನ್ ಪಿಂಟೋ ಮಾರ್ಗ ದರ್ಶನದಲ್ಲಿ ವಿದ್ಯಾರ್ಥಿನಿಯರು ತಮ್ಮ ಮನೆ ಪರಿಸರದಲ್ಲಿ ಇಂಗುಗುಂಡಿಗಳನ್ನು ಮಾಡಿದ್ದಾರೆ. ಎಲ್ಲ ವಿದ್ಯಾರ್ಥಿಗಳು ತಾವು ಮನೆಯಲ್ಲಿ ನಿರ್ಮಿಸಿರುವ ಇಂಗುಗುಂಡಿಗಳ ವರದಿ ನೀಡಿದ್ದು, ಈ ಮೂಲಕ ಒಟ್ಟು ಇಂಗುಗುಂಡಿಗಳ ಸಂಖ್ಯೆ ಲೆಕ್ಕ ಹಾಕಲಾಗಿದೆ. ಬೇಸಗೆಯಲ್ಲಿ ಹಲವು ವಿದ್ಯಾರ್ಥಿಗಳ ಮನೆಯವರು ನೀರಿನ ಬವಣೆ ಅನುಭವಿಸುತ್ತಿದ್ದು, ಭೂಮಿಗೆ ನೀರು ಕೊಟ್ಟಾಗಲೇ ನಾವು ಬದುಕಲು ಸಾಧ್ಯ ಎಂಬ ನಿಟ್ಟಿ ನಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ್ದರು.
ಶಾಲಾ ವಠಾರದಲ್ಲಿ ಸಾಕಷ್ಟು ಸ್ಥಳಾವಕಾಶ ಲಭ್ಯತೆ ಇಲ್ಲದ ಕಾರಣ ವಿದ್ಯಾರ್ಥಿನಿಯರು ಅವರ ಮನೆಯ ಸುತ್ತಮುತ್ತ ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ. ಕೆಲವು ವಿದ್ಯಾರ್ಥಿನಿಯರು ಹೆತ್ತವರ ಸಹಾಯ ಪಡೆದರೆ, ಇನ್ನು ಕೆಲವು ವಿದ್ಯಾರ್ಥಿನಿಯರು ಸ್ವತಃ ಪ್ರತೀ ದಿವಸ ಸ್ವಲ್ಪ ಸ್ವಲ್ಪ ಕೆಲಸ ಮಾಡಿ ಗುಂಡಿ ಪೂರ್ಣಗೊಳಿಸಿದ್ದಾರೆ. 3 ಅಡಿ ಉದ್ದ, 2 ಅಡಿ ಅಗಲ, 2 ಅಡಿ ಆಳದ ಗುಂಡಿ ನಿರ್ಮಿಸಿದ್ದಾರೆ.
Related Articles
ಜಲಸಂರಕ್ಷಣೆ ಸಾಧ್ಯ
9 ಇಂಗುಗುಂಡಿಗಳನ್ನು 3 ದಿನಗಳಲ್ಲಿ ಗುಡ್ಡ ಪ್ರದೇಶದಲ್ಲಿ ನಿರ್ಮಿಸಿದ್ದೇನೆ. ನೀರಿನ ಸಂರಕ್ಷಣೆ ಮಾಡಲು ವಿದ್ಯಾರ್ಥಿಗಳಾದ ನಮ್ಮಿಂದ ಸಾಧ್ಯವಿದೆ. ನನ್ನ ಕೆಲಸದಿಂದ ನನ್ನ ಮನೆಯವರಿಗೆ, ನೆರೆಹೊರೆಯವರಿಗೆ ಪ್ರೇರಣೆಯಾಗಿದೆ. ನನ್ನ ಅಕ್ಕಂದಿರೂ ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ.
–ರಚನಾ, ವಿದ್ಯಾರ್ಥಿನಿ
Advertisement