Advertisement

ಬಂಟ್ವಾಳ: ಎಎಸ್ಪಿ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ

09:51 PM Apr 15, 2020 | Sriram |

ಬಂಟ್ವಾಳ: ಕೋವಿಡ್ 19 ವೈರಸ್‌ ಹರಡುವಿಕೆಯ ಮುನ್ನೆಚ್ಚರಿಕೆಯಾಗಿ ಕೇಂದ್ರ ಸರಕಾರ ಲಾಕ್‌ಡೌನ್‌ ಆದೇಶವನ್ನು ಮೇ 3ರ ವರೆಗೆ ಮುಂದುವರಿಸಿರುವ ಜತೆಗೆ ಕೆಲವೊಂದು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಅದರ ಅನುಷ್ಠಾನದ ದೃಷ್ಟಿಯಿಂದ ಬುಧವಾರ ದ.ಕ. ಜಿಲ್ಲಾ ಅಡಿಶನಲ್‌ ಎಸ್ಪಿ ಡಾ| ವಿಕ್ರಮ್‌ ಅಮ್ಟೆ ಅವರು ಬಿ.ಸಿ. ರೋಡ್‌ನ‌ಲ್ಲಿ ಸ್ವತಃ ರಸ್ತೆಗಿಳಿದು ವಾಹನ ಚಾಲಕರು ಹಾಗೂ ಸವಾರರಿಗೆ ಎಚ್ಚರಿಕೆ ನೀಡಿದರು.

Advertisement

ಔಷಧ ಸಹಿತ ಅಗತ್ಯ ವಸ್ತು ಖರೀದಿಗೆ ಚತುಷ್ಪಕ್ರ ವಾಹನಗಳಲ್ಲಿ ಹಿಂಬದಿ ಒಬ್ಬರಿ ಗಷ್ಟೇ ಅವಕಾಶ, ದ್ವಿಚಕ್ರ ವಾಹನಗಳಲ್ಲಿ ಸವಾರ ರಿಗಷ್ಟೇ ಅವಕಾಶ ಎಂಬುದರ ಕುರಿತು ಜನರಿಗೆ ತಿಳಿಹೇಳಲಾಯಿತು. ಕಾರ್ಯಾಚರಣೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್‌ ಡಿ’ಸೋಜಾ, ಬಂಟ್ವಾಳ ನಗರ ಠಾಣೆಯ ಪಿಎಸ್‌ಐ ಅವಿನಾಶ್‌, ಅಪರಾಧ ವಿಭಾಗದ ಪಿಎಸ್‌ಐ ಸಂತೋಷ್‌, ಪ್ರೊಬೆಷನರಿ ಪಿಎಸ್‌ಐ ಮಲ್ಲಿ ಕಾರ್ಜುನ ಕೊರಾಣಿ ಹಾಗೂ ಸಿಬಂದಿ ಪಾಲ್ಗೊಂಡಿದ್ದರು.

ಬಂಟ್ವಾಳ: ಬುಧವಾರದ ಸ್ಥಿತಿ ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಜನರಿಗೆ ಬೆಳಗ್ಗಿನ ಹೊತ್ತು ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ತಾಲೂಕಿನಲ್ಲಿ ಬುಧವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಿದರು. ಮೆಡಿಕಲ್‌ ಮಳಿಗೆಗಳು ಸಂಜೆಯವರೆಗೂ ತೆರೆದುಕೊಂಡಿದ್ದವು.

ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ಹೊರ ಭಾಗದಲ್ಲೂ ಜನರು ಸರತಿಯಲ್ಲಿ ನಿಂತಿದ್ದರು. ತಹಶೀಲ್ದಾರ್‌ ಸಹಿತ ಪೊಲೀಸ್‌ ಅಧಿಕಾರಿ ಸ್ಥಳಕ್ಕೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬ್ಯಾಂಕ್‌ ಗ್ರಾಹಕರಿಗೆ ಸೂಚಿಸಿದರು. ಅನಗತ್ಯ ತಿರುಗಾಟ ನಡೆಸುವವರಿಗೆ ಎಚ್ಚರಿಕೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next