Advertisement

ಬಂಟ್ವಾಳ: ಪೊಲೀಸರಿಂದ ಕಾರ್ಯಾಚರಣೆ

08:45 PM Apr 25, 2020 | Sriram |

ಬಂಟ್ವಾಳ: ಜನರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಅನಗತ್ಯ ಓಡಾಟ ನಿರಂತರವಾಗಿದ್ದು, ಹೀಗಾಗಿ ಬಂಟ್ವಾಳ ಪೊಲೀಸರು ಏಕಕಾಲದಲ್ಲೇ ವಿವಿಧೆಡೆ ವಾಹನಗಳನ್ನು ತಡೆದು ಆದೇಶ ಮೀರಿ ಓಡಾಟ ನಡೆಸುವವರಿಗೆ ಎಚ್ಚರಿಕೆ ನೀಡಿದರು. ಬಿ.ಸಿ. ರೋಡ್‌ ಜಂಕ್ಷನ್‌, ನಾರಾಯಣ ಗುರು ವೃತ್ತ, ಮೆಲ್ಕಾರ್‌ ಜಂಕ್ಷನ್‌ ಮೊದಲಾದೆಡೆ ತಪಾಸಣೆ ನಡೆಯಿತು.

Advertisement

ಈ ಭಾಗಗಳಲ್ಲಿ ಆಗಮಿಸಿದ ಎಲ್ಲ ವಾಹನಗಳನ್ನು ತಡೆದು ವಿಚಾರಣೆ ನಡೆಸಿ ಆವಶ್ಯಕ ಆಗಮಿಸಿದವರಿಗೆ ಮುಂದಕ್ಕೆ ತೆರಳುವುದಕ್ಕೆ ಅವಕಾಶ ಮಾಡಿಕೊಟ್ಟರು. ಉಳಿದಂತೆ ಅನಗತ್ಯ ತಿರುಗಾಟ ನಡೆಸುವವರಿಗೆ ಎಚ್ಚರಿಕೆ ನೀಡಿದರು. ದ್ವಿಚಕ್ರ ವಾಹನಗಳು ಹಾಗೂ ಖಾಸಗಿ ವಾಹನಗಳಲ್ಲಿ ಲಾಕ್‌ಡೌನ್‌ ಆದೇಶ ಮೀರಿ ಪ್ರಯಾಣಿಸುವವರನ್ನು ತಡೆದು ನಿಲ್ಲಿಸಿದರು.

ಬಿ.ಸಿ. ರೋಡ್‌ನ‌ ನಾರಾಯಣ ಗುರು ವೃತ್ತದಲ್ಲಿ ಬಂಟ್ವಾಳ ನಗರ ಪಿಎಸ್‌ಐ ಅವಿನಾಶ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆ ದಿದ್ದು, ಮೆಲ್ಕಾರ್‌ ಭಾಗದಿಂದ ಹಾಗೂ ಪುಂಜಾಲಕಟ್ಟೆ ಹೆದ್ದಾರಿಯಿಂದ ಆಗಮಿಸಿದ ವಾಹನಗಳನ್ನು ತಪಾಸಣೆ ನಡೆಸಲಾಯಿತು.

ಈ ವೇಳೆ ಹೆಚ್ಚಿನ ವಾಹನಗಳು ಕಂಡುಬಂದಿದ್ದು, ಪಿಎಸ್‌ಐ ಅವರ ಜತೆ ಸಿಬಂದಿಯೂ ವಾಹನಗಳ ಸಂಖ್ಯೆ ಹೆಚ್ಚದಂತೆ ನಿಭಾಯಿಸಿದರು.

ಉಳಿದಂತೆ ಬಿ.ಸಿ. ರೋಡ್‌ ಜಂಕ್ಷನ್‌ನಲ್ಲಿ ಕೈಕಂಬ ಭಾಗದಿಂದ ಆಗಮಿಸಿದ ವಾಹನಗಳನ್ನು ಅಪರಾಧ ವಿಭಾಗದ ಪಿಎಸ್‌ಐ ಸಂತೋಷ್‌ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಮೆಲ್ಕಾರ್‌ನಲ್ಲಿ ಸಂಚಾರಿ ಠಾಣಾ ಪಿಎಸ್‌ಐ ಗಳಾದ ರಾಜೇಶ್‌ ಕೆ.ವಿ. ಹಾಗೂ ರಾಮ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಒಟ್ಟಿನಲ್ಲಿ ಎಲ್ಲ ಕಡೆ ಪೊಲೀಸರು ಈ ರೀತಿಯ ಕಾರ್ಯಾಚರಣೆಯ ಮೂಲಕ ಅನಗತ್ಯ ತಿರುಗಾಟ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next