Advertisement

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

10:56 PM Dec 02, 2021 | Team Udayavani |

ಬಂಟ್ವಾಳ: ಚಿರತೆಯೊಂದು ನಾಯಿಯ ಬೇಟೆಗಾಗಿ ಬರುತ್ತಿರುವ ದೃಶ್ಯ ವೊಂದು ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ನರಿಕೊಂಬು ಗ್ರಾಮದ ನಿರ್ಮಲ್‌ನ ನಿವಾಸಿ ಜಯಂತ್‌ ಅವರ ಮನೆಯ ಅಂಗಳಕ್ಕೆ ಡಿ. 1ರಂದು ರಾತ್ರಿ ವೇಳೆ ಚಿರತೆಯೊಂದು ಮನೆಯ ಆವರಣಕ್ಕೆ ಬಂದು ಹೋಗುವ ದೃಶ್ಯವೊಂದು ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಸ್ಥಳೀಯ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಗೆ ವಿಷಯ ತಿಳಿಸಲಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next