Advertisement
ಕಳೆದ ನಾಲ್ಕೂವರೆ ವರ್ಷಗಳ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯ ಬಗ್ಗೆ ಜನಜಾಗೃತಿ ಮೂಡಿ ಸುವ ಉದ್ದೇಶದಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ನೇತಾರ ರಾಜೇಶ್ ನಾೖಕ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಸಹಸ್ರಾರು ಸಂಖ್ಯೆಯ ಕಾರ್ಯಕರ್ತ ರಿಂದ ಭಾರತ ಮಾತಾಕಿ ಜೈ ಜಯ ಘೋಷದೊಂದಿಗೆ ಆರಂಭವಾದ ಪಾದಯಾತ್ರೆ ಕುಟ್ಟಿಕಳ, ಇರ್ನಿ ಮೂಲಕ 8 ಕಿ.ಮೀ. ದೂರದ ಕಪೆìಗೆ ತಲುಪಿ ಅಲ್ಲಿ ಸಾರ್ವಜನಿಕ ಸಭೆ ನಡೆಯಿತು. ಬಳಿಕ ಪಕ್ಷ ಪ್ರಮುಖರು ಪಕ್ಷದ ಸ್ಥಳೀಯ ಕಾರ್ಯಕರ್ತರ ಮನೆಗಳಲ್ಲಿ ರಾತ್ರಿ ವಾಸ್ತವ್ಯ ಮಾಡಿದರು.
ದಾರಿಯುದ್ದಕ್ಕೂ ಸಿಗುವ ಮನೆ ಮಂದಿಗೆ ನಾಯಕರ ಸಹಿತ ಕಾರ್ಯ ಕರ್ತರು ಮುಂದಿನ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಬಿಜೆಪಿ ನೇತಾರ ರಾಜೇಶ್ ನಾೖಕ್ ಮಾತನಾಡಿ, ಮುಂದಿನ 13 ದಿನಗಳಲ್ಲೂ ಕ್ಷೇತ್ರದ ಕಾರ್ಯಕರ್ತ ಮನೆಗಳಲ್ಲಿ ಉಳಿದುಕೊಳ್ಳುವ ಮೂಲಕ ಯಾತ್ರೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಸಮಾರೋಪದ ಬಳಿಕವೇ ಮನೆಗೆ ತೆರಳುತ್ತೇವೆ ಎಂದರು. ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು. ಬಿಜೆಪಿ ಶಾಂತಿಯ ಪ್ರತೀಕ
ದೇಶದ ಏಕತೆ, ಶಾಂತಿ, ಸೌಹಾರ್ದ ಕಾಪಾಡುವುದು ಬಿಜೆಪಿ ಆಡಳಿತದಲ್ಲಿ ಮಾತ್ರ ಸಾಧ್ಯ. ಬಿಜೆಪಿ ಶಾಂತಿಯ ಪ್ರತೀಕ. ಇಂದು ಜಿಲ್ಲೆಯಲ್ಲಿ ನಡೆಯು ತ್ತಿರುವ ಕೋಮು ಗಲಭೆಗಳ ಹಿಂದೆ ವ್ಯವಸ್ಥಿತ ಸಂಚಿದೆ. ಒಂದು ಕೋಮನ್ನು ಬೆಂಬಲಿಸಿ ಪ್ರಚೋದಿಸುವ ಮೂಲಕ ಜನಸಾಮಾನ್ಯರ, ಅಮಾಯಕರ ಜೀವ ಹರಣ ಮಾಡಲಾಗುತ್ತಿದೆ ಎಂದು ಹೇಳಿದ ರಾಜೇಶ್ ನಾೖಕ್, ಈ ಹಿಂದೆ ಬಂಟ್ವಾಳದಲ್ಲಿ ಬಿಜೆಪಿ ಶಾಸಕರು ಇದ್ದಾಗ ಯಾವುದೇ ಕೋಮು ಗಲಾಟೆಗೆ ಅವಕಾಶ ಆಗಿರಲಿಲ್ಲ ಎಂದು ಅವರು ಸ್ಮರಿಸಿಕೊಂಡರು. ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ. ಕೆ. ಮೋನಪ್ಪ ಭಂಡಾರಿ ಮಾತನಾಡಿದರು.
Related Articles
Advertisement