Advertisement

“ಬಂಟ ಸಮುದಾಯದ ಬಡವರಿಗೆ 100 ಮನೆ ನಿರ್ಮಾಣ ಗುರಿ’

07:51 PM May 05, 2019 | Sriram |

ಬಂಟ್ವಾಳ : ಬಂಟರೆಂದೂ ಬಡವರಲ್ಲ, ಆರ್ಥಿಕವಾಗಿ ಬಡವರಾಗಿರಬ ಹುದಷ್ಟೇ. ಸಮಾಜದಲ್ಲಿ ಯಾರೂ ವಸತಿ ಹೀನರಾಗಬಾರದು. ಮನೆ ಕಟ್ಟಲು ಕಷ್ಟ ದಲ್ಲಿರುವ ಕುಟುಂಬಗಳನ್ನು ಗುರುತಿಸಿ ನೂರು ಮನೆಗಳನ್ನು ನಿರ್ಮಿಸಿಕೊಡುವ ಗುರಿಯನ್ನು ಹೊಂದಿದ್ದು, ಈಗಾಗಲೇ ಮೂವತ್ತು ಮನೆಗಳನ್ನು ಸಮಾಜಕ್ಕೆ ಅರ್ಪಿಸಿಯಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಹೇಳಿದರು.

Advertisement

ಅವರು ಮೇ 2ರಂದು ಬಂಟರ ಸಂಘ ಸಾಲೆತ್ತೂರು ವಲಯದ ವಾರ್ಷಿಕ ಸಮಾರಂಭ ಮತ್ತು ಸತ್ಯಗಣಪತಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ, ಸಾಲೆತ್ತೂರು ವಲಯದ ನಿರ್ಮಾಣ ಹಂತದ ಮೂರು ಮನೆಗಳಿಗೆ ಮೂರನೇ ಹಂತದ ತಲಾ 50 ಸಾವಿರ ರೂ. ಹಾಗೂ ಬಡಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕಾಗಿ 25 ಸಾವಿರ ರೂ. ಚೆಕ್ಕನ್ನು ವಿತರಿಸಿ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಬಂಟವಾಳದ ಅಧ್ಯಕ್ಷ ವಿವೇಕ್‌ ಶೆಟ್ಟಿ ನಗ್ರಿಗುತ್ತು ಅವರು ತಾಲೂಕಿನಿಂದ ಬಂಟ ಸಮುದಾಯಕ್ಕೆ ದೊರಕುವ ಸವಲತ್ತುಗಳ ಬಗ್ಗೆ ವಿವರಿಸಿದರು.

ಸಾಧಕರಿಗೆ ಸಮ್ಮಾನ
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರನ್ನು ಇದೇ ಸಂದರ್ಭ ಅಭಿನಂದಿ ಸಲಾಯಿತು. ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ವಿಶೇಷ ಸಾಧನೆಗೈದ ವಿಟ್ಲಪಟ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಸುಧಾ ಎಸ್‌. ಶೆಟ್ಟಿ ಚೆಂಬರಡ್ಕ ಅವರನ್ನು ಸಮ್ಮಾನಿಸಲಾಯಿತು.

ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಂಟ್ವಾಳ ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ರಮಾ ಎಸ್‌. ಭಂಡಾರಿ, ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್‌ ಹೆಗ್ಡೆ, ಕೊಳ್ನಾಡು ಗ್ರಾಮ ಪಂಚಾಯತ್‌ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್‌ ಶೆಟ್ಟಿ ಕರ್ಕಳ, ಕೊಳ್ನಾಡು ತಾ.ಪಂ. ಸದಸ್ಯ ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.

Advertisement

ಡಾ| ರಾಜೇಶ್‌ ರೈ ಪಾಲ್ತಾಜೆ ಪ್ರಸ್ತಾವಿಸಿ ದರು. ಮಹಿಳಾ ಘಟಕದ ಕಾರ್ಯದರ್ಶಿ ಸಂಧ್ಯಾ ಯು. ಶೆಟ್ಟಿ ಕಾಂತುಮೂಲೆ ವರದಿ ವಾಚಿಸಿದರು. ಬಂಟರ ಸಂಘ ಸಾಲೆತ್ತೂರು ಅಧ್ಯಕ್ಷ ದೇವಪ್ಪ ಶೇಖ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಶಶಿಧರ ರೈ ಕುಲಾಲು ವಂದಿಸಿ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next