Advertisement

Bantwal; ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

12:20 AM Jan 13, 2024 | Team Udayavani |

ಬಂಟ್ವಾಳ: ಹಣವನ್ನು ಪಣವಾಗಿಟ್ಟು ವಾಹನಗಳ ನೋಂದಣಿ ಸಂಖ್ಯೆಗಳ ಆಧಾರದಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.

Advertisement

ಮಂಜೇಶ್ವರ ವರ್ಕಾಡಿ ಗ್ರಾಮ ನಿವಾಸಿ ರಂಜನ್‌ ಹಾಗೂ ಮಂಗಳೂರು ಆಕಾಶ್‌ಭವನ ನಿವಾಸಿ ಸುರೇಶ್‌ ಎಚ್‌. ಶೆಟ್ಟಿ ಆರೋಪಿಗಳಾಗಿದ್ದು, ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದರು.

ಆರೋಪಿಗಳಿಂದ 2,010 ರೂ. ನಗದು, ಮೊಬೈಲ್‌, ಮಟ್ಕಾ ಚೀಟಿ ಸೇರಿದಂತೆ ಇತರ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next