Advertisement
ಮೂರು ಗ್ರಾಮಗಳ ಕೆಲವೆಡೆ ರಾಸಾಯನಿಕ ಸಿಂಪಡಣೆ ಮಾಡಿದ್ದು, ಅದಕ್ಕೆ ಅನುಮತಿ ನೀಡಿರುವ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ದೂರುಗಳು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಹಾಗೂ ಬಂಟ್ವಾಳ ಸಿಪಿಐ ಟಿ.ಡಿ. ನಾಗರಾಜ್ ಅವರು ಘಟನೆ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.
ರಾಸಾಯನಿಕ ಸಿಂಪಡಣೆಗೆ ಸಜೀಪಮುನ್ನೂರು ಪಿಡಿಒ ಡಾ| ಪ್ರಕಾಶ್ ಅನುಮತಿ ಕೊಟ್ಟಿದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ತಾ.ಪಂ. ಇಒ ರಾಜಣ್ಣ ಅವರು ಪಿಡಿಒ ಅವರಿಂದ ಮಾಹಿತಿ ಪಡೆದಿದ್ದಾರೆ. ಮನೆಯ ಮುಂದೆ ಚರಂಡಿಗೆ ಫಿನಾಯಿಲ್ ಹಾಕಿ ಸ್ವತ್ಛಗೊಳಿಸುವುದಕ್ಕೆ ತಿಳಿಸಿದ್ದೇನೆಯೇ ವಿನಃ ರಾಸಾಯನಿಕ ಸಿಂಪಡಣೆಗೆ ಅನುಮತಿ ಕೊಟ್ಟಿಲ್ಲ ಎಂದು ಪಿಡಿಒ ಸ್ಪಷ್ಟಪಡಿಸಿದ್ದಾರೆ. ಪಿಡಿಒ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.