Advertisement
ಗರಿಷ್ಠ-ಕನಿಷ್ಠಪಿಲಾತಬೆಟ್ಟು ಗ್ರಾಮ ಸರಕಾರಿ ಹಿ.ಪ್ರಾ.ಶಾಲೆ ಮತಗಟ್ಟೆ ಸಂಖ್ಯೆ 17ರಲ್ಲಿ ಗರಿಷ್ಠ ಶೇ. 87.63 ಮತದಾನ ಆಗಿದೆ. ಕನ್ಯಾನ ಗ್ರಾಮ ಬಂಡಿತಡ್ಕ ಹಿ.ಪ್ರಾ. ಶಾಲೆಯಲ್ಲಿ ಕನಿಷ್ಠ ಶೇ. 51.52 ಮತದಾನ ಆಗಿದೆ. ಒಟ್ಟು 249 ಮತಗಟ್ಟೆಗಳಲ್ಲಿ 1,166 ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವ ಹಿಸಿದ್ದರು. 85 ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ, 35 ಮತಗಟ್ಟೆಗಳಿಗೆ ವೀಕ್ಷಕರ ನೇಮಕ, 17 ಮತಗಟ್ಟೆಗಳಲ್ಲಿ ನೇರ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. 15 ಮತಗಟ್ಟೆ ಗಳಲ್ಲಿ ವೀಡಿಯೋ ಗ್ರಾಫಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮತದಾನ ಶಾಂತಿಯುತವಾಗಿತ್ತು. ಜಿ.ಪಂ. ಸಿಇಒ ಡಾ| ಸೆಲ್ವಮಣಿ ಮಾರ್ಗದರ್ಶನದಲ್ಲಿ ಬಂಟ್ವಾಳ ತಹಶೀಲ್ದಾರ್ ಸಣ್ಣರಂಗಯ್ಯ, ತಾ.ಪಂ.ಇಒ ರಾಜಣ್ಣ ನೇತೃತ್ವದಲ್ಲಿ ಚುನಾವಣ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ದ.ಕ. ಲೋಕಸಭಾ ಚುನಾವಣೆಯ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಗುರುವಾರ ಮೊಡಂಕಾಪಿನಲ್ಲಿರುವ ಬಂಟ್ವಾಳ ಕ್ಷೇತ್ರದ ಡಿಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಎ.ಆರ್.ಒ ಮಹೇಶ್, ತಹಶಿಲ್ದಾರ್ ಸಣ್ಣರಂಗಯ್ಯ ಮೊದಲಾದವರಿದ್ದರು.
ಮೊಡಂಕಾಪು ಇನ್ಫೆಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಮಸ್ಟರಿಂಗ್ ಬಳಿಕ ಎಲ್ಲ ಇವಿಎಂ ಯಂತ್ರಗಳನ್ನು ಎನ್‌ಐಟಿಕೆ ಭದ್ರತ ಕೊಠಡಿಗೆ ಸಾಗಿಸಲಾಗಿದೆ.
ಎಸ್.ಸಿ. ಮಹೇಶ್
ಚುನಾವಣಾಧಿಕಾರಿ, ಬಂಟ್ವಾಳ ತಾ|