Advertisement

ಬಂಟ್ವಾಳ: 600 ಮಂದಿಗೆ ಊಟ ನೀಡುವ ಮೂಲಕ ಒಂದು ದಿನದ ಹಸಿವು ನೀಗಿಸಿ ಮಾದರಿಯಾದ ಯುವಕರು

09:16 PM May 03, 2021 | Team Udayavani |

ಬಂಟ್ವಾಳ: ಬಿ.ಸಿ.ರೋಡಿನಿಂದ ಮೂಲ್ಕಿವರೆಗೆ ರಸ್ತೆ ಬದಿಯಲ್ಲಿದ್ದ ನಿರ್ಗತಿಕರು, ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸರು ಸೇರಿದಂತೆ ಸುಮಾರು 600 ಮಂದಿಗೆ ಊಟ ನೀಡುವ ಮೂಲಕ ಬಂಟ್ವಾಳದ ಯುವಕ ಮಾದರಿಯಾಗಿದ್ದಾರೆ. ಜತೆಗೆ ಬಿಜೈ ಕಾಪಿಕಾಡಿನ ಸ್ನೇಹದೀಪ್ ಹೋಮ್ ಫಾರ್ ಚಿಲ್ಡ್ರನ್ಸ್ ಸಂಸ್ಥೆ ಹಾಗೂ ಮೂಲ್ಕಿಯ ಮೈಮುನಾ ಫೌಂಡೇಶನ್ ಆಶ್ರಮವಾಸಿಗಳಿಗೂ ಊಟ ನೀಡಿದ್ದಾರೆ.

Advertisement

ಮೇ 2 ರಂದು ಬಂಟ್ವಾಳದ ಅಜಿಲಮೊಗರಿನ ಅಭಿಷೇಕ್ ಸುವರ್ಣ ಹಾಗೂ ಆತನ ಸ್ನೇಹಿತರು ಈ ಕಾರ್ಯ ಮಾಡಿದ್ದು, ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಸಮಯ ಪ್ರತಿವಾರ ಈ ರೀತಿ ಊಟ ನೀಡುವ ಆಲೋಚನೆ ಹೊಂದಿದ್ದಾರೆ. ಪಿಕ್‌ಆಪ್ ವಾಹನದ ಮೂಲಕ ಸಸ್ಯಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಆಹಾರವನ್ನೂ ನೀಡಿದ್ದಾರೆ.

ಊಟದ ಜತೆಗೆ ನೀರಿನ ಬಾಟಲ್ ಹಾಗೂ ಕೋವಿಡ್‌ನಿಂದ ರಕ್ಷಣೆಗೆ ಮಾಸ್ಕ್ ನೀಡಿ ಅದನ್ನು ಬಳಕೆ ಮಾಡುವಂತೆಯೂ ಕಿವಿಮಾತು ಹೇಳಿದ್ದಾರೆ. ಅಭಿಷೇಕ್ ಜತೆಗೆ ಅವರ ಸ್ನೇಹಿತರಾದ ನಟರಾಜ್ ಸುವರ್ಣ, ಕ್ಯಾನನ್ ಲೋಬೊ, ಧೀರ್ ಡಿಸೋಜಾ, ಲತೀಶ್ ಪೂಜಾರಿ, ಸಂದೀಪ್ ಶೆಟ್ಟಿ, ಪ್ರಕಾಶ್ ಅಂಚನ್, ಸಂತೋಷ್ ಕುಲಾಲ್, ಗಿರೀಶ್ ಕುಲಾಲ್, ಶಿವಾನಂದ್, ನಿತೇಶ್ ಪೂಜಾರಿ ಹಾಗೂ ಜಗದೀಶ್ ಪೂಜಾರಿ ಅವರು ಸಹಕರಿಸಿದ್ದಾರೆ.

Advertisement

ಅನ್ನಕ್ಕಾಗಿ ಪರಿತಪಿಸುವವರ ಒಂದು ದಿನದ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದ್ದು, ಮುಂದೆ ಪ್ರತಿ ವಾರ ಇದೇ ರೀತಿ ಊಟ ನೀಡುವ ಆಲೋಚನೆ ಇದೆ ಎಂದು ಅಭಿಷೇಕ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next