Advertisement
ಇತ್ತೀಚೆಗೆ ದಹಿಸರ್ ಪೂರ್ವದ ಹೊಟೇಲ್ ಸನ್‌ಶೈನ್ ಇನ್ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಶಿಕ್ಷಣ ಹಾಗೂ ಕಲ್ಯಾಣ ಸಮಿತಿ ಮತ್ತು ಮಹಿಳಾ ವಿಭಾಗ ಸಮಿತಿಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹತ್ತನೆಯ ಹಾಗೂ ಹನ್ನೆರಡನೆ ತರಗತಿಯ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಂಶೋಧನೆಯ ಪ್ರಕಾರ ಮನುಷ್ಯನ ಜೀವನದಲ್ಲಿ 16ರಿಂದ 24ರ ಹರೆಯವು ಶಿಕ್ಷಣದ ಫಲವತ್ತಾದ ವರ್ಷ ಎನ್ನಬಹುಬಹುದು. ಈ ಹರೆಯದಲ್ಲಿ ಶಿಕ್ಷಣದ ಬೀಜವನ್ನು ಬಿತ್ತಿದರೆ ಜೀವನದುದ್ದಕ್ಕೂ ನೀವು ನಗು ನಗುತ್ತಾ ಇರಬಹುದು. ಕೆಲವೊಂದು ಪಾಲಕರು ಊರಿನ ಹಳ್ಳಿಯಲ್ಲಿ ಹೈನುಗಾರಿಕೆ ಮುಂತಾದ ಉದ್ಯೋಗವನ್ನು ನಡೆಸುತ್ತಾ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿ ಇಂದು ಅವರ ಮಕ್ಕಳು ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಉತ್ತಮ ಉದ್ಯೋಗಗಳಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಹಿಂದೆ ಹಿರಿಯರ ಮುಂದೆ ನಿಂತು ಮಾತನಾಡಲು ಹೆದರುತ್ತಿ¨ªೆವು. ಮೊದಲು ಮೌಲ್ಯಗಳಿಗೆ ಹೆಚ್ಚು ಬೆಲೆ ಇರುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಪಾಲಕರು ಮಕ್ಕಳೊಂದಿಗೆ ಮಾರ್ಗದರ್ಶಿಯಾಗಿ ಕೆಲವೊಮ್ಮೆ ಸ್ನೇಹಿತರಾಗಿ ಇರಬೇಕಾಗುತ್ತದೆ. ನಮ್ಮ ದಿನನಿತ್ಯದ ಕೆಲಸಗಳೇ ಆಗಲಿ, ಕಲಿಕೆಯಾಗಲಿ ಸಮಯಕ್ಕಿಂತ ಮೊದಲು ಮುಗಿಸುವುದು ಬುದ್ಧಿವಂತಿಕೆ. ಯಾವುದೇ ಶ್ರೇಷ್ಠ ವ್ಯಕ್ತಿಯ ಭಾಷಣ ಅಥವಾ ಒಳ್ಳೆಯ ಮಾತುಗಳು ನಮ್ಮ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಹುದು. ನಮ್ಮನ್ನು ನಾವು ಜಡ್ಜ್ ಮಾಡಬೇಕು. ನಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳು ನಮಗೆ ತಿಳಿದಿರುತ್ತದೆ. ಹಾಗಾಗಿ ನಮ್ಮ ಬುದ್ಧಿವಂತಿಕೆಯನ್ನು ನಾವೇ ಹೆಚ್ಚಿಸಿಕೊಳ್ಳಬೇಕು. ಓದಿನ ಕಡೆಗೆ ಹೆಚ್ಚಿನ ಗಮನ ನೀಡಿ, ಯಾವುದೇ ವಿಷಯವನ್ನು ಬಾಯಿಪಾಠ ಮಾಡುವುದಲ್ಲ, ಅದನ್ನು ಕರಗತ ಮಾಡಿಕೊಳ್ಳಬೇಕು. ಆಗ ಅದು ಎಂದಿಗೂ ಮರೆತು ಹೋಗುವುದಿಲ್ಲ. ಪ್ರಾಮಾಣಿಕತೆ ಹಾಗೂ ಪರಿಶ್ರಮ ವಿದ್ಯಾರ್ಥಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಓದುವುದು, ಬರೆಯುವುದು, ಅರ್ಥಮಾಡಿಕೊಳ್ಳುವುದು ಇವು ಮೂರು ಒಟ್ಟಿಗೆ ಆಗಬೇಕು. ವಿದ್ಯಾರ್ಥಿಗಳಿಗೆ ದೂರ ದೃಷ್ಟಿ ಇರಬೇಕು ಎಂದು ನುಡಿದು, ಯಾವುದೇ ಒಂದು ವಿಷಯವನ್ನು ಸಾವಿರ ಸಲ ಸ್ವಅಧ್ಯಯನ ಮಾಡುವುದಕ್ಕಿಂತ ಒಂದೇ ಒಂದು ಸಲ ಆ ವಿಷಯವನ್ನು ತರಗತಿಯಲ್ಲಿ ಗಮನವಿಟ್ಟು ಆಲಿಸುವುದು ಅತ್ಯುತ್ತಮ ಎಂದು ನುಡಿದು ಶುಭ ಹಾರೈಸಿದರು.
Advertisement
ಬಂಟರ ಸಂಘ ಮೀರಾ-ಭಾಯಂದರ್:ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ
04:03 PM Feb 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.