Advertisement

ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಚುರುಕು

01:23 AM Feb 17, 2020 | Sriram |

 ವಿಶೇಷ ವರದಿ-ಪುಂಜಾಲಕಟ್ಟೆ: ಬಿ.ಸಿ. ರೋಡ್‌- ಪುಂಜಾಲಕಟ್ಟೆ ಸಂಪರ್ಕದ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಚುರುಕು ಪಡೆದು ಕೊಂಡಿದೆ. ಬಿ.ಸಿ. ರೋಡ್‌ನಿಂದ ಪುಂಜಾಲ ಕಟ್ಟೆಯವರೆಗಿನ ರಸ್ತೆಯ ಚಿತ್ರಣವೇ ಬದಲಾಗಿದೆ. ವಿಶಾಲ ಚತುಷ್ಪಥ – ದ್ವಿಪಥ ರಸ್ತೆಗಳು ಶೀಘ್ರ ಸಂಪರ್ಕಕ್ಕೆ ರಹದಾರಿಯಾಗಲಿವೆ.

Advertisement

ತಿರುವು ರಸ್ತೆಗಳಿಗೆ ಮುಕ್ತಿ
ಈ ಹಿಂದೆ ಬಿ.ಸಿ. ರೋಡ್‌ನಿಂದ ಪುಂಜಾಲಕಟ್ಟೆ ಯವರೆಗೆ ಸಾಕಷ್ಟು ತಿರುವು ವಾಹನ ಚಾಲಕರನ್ನು ಎದುರುಗೊಳ್ಳುತ್ತಿತ್ತು. ಈ ತಿರುವುಗಳಿಂದಾಗಿಯೇ ಆಗಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸು ತ್ತಿದ್ದವು. ಧರ್ಮಸ್ಥಳ, ಚಿಕ್ಕಮಗಳೂರಿಗೆ ಹೋಗು ವಂತಹ ಪ್ರವಾಸಿಗಳಿಗೂ ಪ್ರಯಾಣ ಕಷ್ಟವಾಗುತ್ತಿತ್ತು. ಇದೀಗ ಚತುಷ್ಪಥ ಬಂಟ್ವಾಳ ದಿಂದ ಪುಂಜಾಲಕಟ್ಟೆವರೆಗಿನ ಸುಮಾರು 35 ತಿರುವುಗಳನ್ನು ಬಹುತೇಕ ನೇರಗೊಳಿಸ ಲಾಗುತ್ತಿದೆ. ಈ ಸಂದರ್ಭ ಏರು ಪ್ರದೇಶ, ಗುಡ್ಡಗಳ ಕಲ್ಲು, ಮಣ್ಣು ತೆಗೆದು ಸಮತಟ್ಟು ಕೆಲಸ ನಡೆಯುತ್ತಿದೆ. ಇದಕ್ಕಾಗಿ ಮರ ಗಳನ್ನು ಉರುಳಿಸಲಾಗಿದೆ. ಹಳೆ ವಿದ್ಯುತ್‌ ಕಂಬ ಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಸಮನಾಂತರವಾಗಿ ಅಳವಡಿಸಲಾಗುತ್ತಿದೆ.

ಬಂಟ್ವಾಳ ಪ್ರವಾಸಿ ಬಂಗ್ಲೆಯಲ್ಲಿ ಸಭೆ
ತಿರುವು ನೇರವಾಗಿಸುವ ಸಂದರ್ಭ ಕೆಲವೆಡೆ ಮನೆಗಳಿದ್ದು, ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಹಂಚಿಕಟ್ಟೆಯಿಂದ ವಗ್ಗದವರೆಗೆ ರಸ್ತೆಯ ಒಂದು ಪಾರ್ಶ್ವದಲ್ಲಿ ಕಡಿದಾದ ಇಳಿಜಾರು, ಕಿರು ನದಿ ಇರುವುದರಿಂದ ಕೊಡ್ಯಮಲೆ ಅರಣ್ಯ ಪ್ರದೇಶದ ಬಳಿ ಗುಡ್ಡ ಸಮತಟ್ಟುಗೊಳಿಸಿ ರಸ್ತೆ ನಿರ್ಮಿಸಲಾಗಿದೆ. ಪುಂಜಾಲಕಟ್ಟೆಯಿಂದ ಬಾಂಬಿಲ ಮಸೀದಿವರೆಗೆ ಭಾಗಶಃ ಕಾಮಗಾರಿ ಪೂರ್ತಿಗೊಂಡಿದ್ದು, ಮಸೀದಿಯಿಂದ ಬಾಂಬಿಲ ಸೇತುವೆಯವರೆಗೆ ಪೇಟೆ ವಿಸ್ತರಣೆಯಾಗಬೇಕಿದೆ. ಬಾಂಬಿಲ ಪೇಟೆ ರಸ್ತೆ ಬದಿ ಮನೆಗಳ ತೆರವು ನಡೆಸಬೇಕಾಗಿದೆ. ಮೂರ್ಜೆ ಬಳಿ ತಿರುವು ಜಾಗ ಸ್ವಾಧೀನವಾಗದೆ ಕಾಮಗಾರಿ ಸ್ಥಗಿತಗೊಳಿಸ ಲಾಗಿದೆ. ಕೆಲವು ಹೆಚ್ಚುವರಿ ಸ್ಥಳ ಸ್ವಾಧೀನದ ತಕ ರಾರು ಮಾತುಕತೆ ಬಗ್ಗೆ ಫೆ. 24 ರಂದು ಬಂಟ್ವಾಳ ಪ್ರವಾಸಿ ಬಂಗ್ಲೆಯಲ್ಲಿ ಸಭೆ ಕರೆಯಲಾಗಿದೆ ಎಂದು ರಾ.ಹೆ. ಅಭಿಯಂತರು ತಿಳಿಸಿದ್ದಾರೆ.

ವಗ್ಗ ಪೇಟೆ ವಿಸ್ತರಣೆ
ಕಾವಳಮೂಡೂರು ಗ್ರಾಮದ ವಗ್ಗ ಸಣ್ಣ ಜಂಕ್ಷನ್‌. ಇಲ್ಲಿ ವ್ಯಾಪಾರಿ ಮಳಿಗೆಗೆಳು, ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳ ಶಾಖೆಗಳಿದೆ. ವಗ್ಗದ ಮೂಲಕವೇ ಭೂ ಕೈಲಾಸ ಪ್ರತೀತಿಯ ಶ್ರೀ ಕಾರಿಂಜೆಶ್ವರ ದೇವಸ್ಥಾನಕ್ಕೂ ಹೋಗಬೇಕು. ಕಿಷ್ಕಿಂದೆಯಂತಿದ್ದ ವಗ್ಗ ಪ್ರಮುಖ ಪಟ್ಟಣವಾಗಿ ಅಭಿವೃದ್ಧಿªಗೊಳ್ಳುತ್ತಿದ್ದರೂ ಇಕ್ಕಟಾದ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಜನರು ತೊಂದರೆ ಪಡುವ ಸ್ಥಿತಿ ಇತ್ತು. ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ರಸ್ತೆ ಪಕ್ಕ ಇದ್ದ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆಗೊಳಿಸಲಾಗಿದ್ದು, ವಗ್ಗದ ಚಿತ್ರಣವೇ ಬದಲಾಗಿದೆ.

4 ದೊಡ್ಡ, 65 ಕಿರು ಸೇತುವೆ
ಬಿ.ಸಿ. ರೋಡ್‌ನಿಂದ ಪುಂಜಾಲಕಟ್ಟೆಯವರೆಗೆ 4 ದೊಡ್ಡ ಸೇತುವೆ, 65 ಕಿರು ಸೇತುವೆ ನಿರ್ಮಾಣ ಗೊಳ್ಳಲಿದೆ. ಭಂಡಾರಿಬೆಟ್ಟು, ಮಣ್ಣಿಹಳ್ಳದ ಬಳಿ ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದರೆ, ಆಲಂಪುರಿ, ಬಾಂಬಿಲ ಬಳಿ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. 65 ಸಣ್ಣ ಸೇತುವೆಗಳು ನಿರ್ಮಾಣಗೊಳ್ಳಲಿದ್ದು, ಬಹುತೇಕ ಪೂರ್ಣಗೊಂಡಿದೆ. ಡಿಸೆಂಬರ್‌ ತಿಂಗಳಿನಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳ ಲಿದೆ ಎಂದು ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.

Advertisement

 ಅಡ್ಡಿಯಾಗದಂತೆ ಕಾಮಗಾರಿ
ರಸ್ತೆ ಪಕ್ಕದ ಗುಡ್ಡದ ಭಾಗದ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗಿದೆ. ತಿರುವುಗಳು, ಕಡಿದಾದ ಗುಡ್ಡಗಳನ್ನು ಸರಿಪಡಿಸಲಾಗುತ್ತಿದೆ. ಇದಕ್ಕಾಗಿ ಅರಣ್ಯ ಪ್ರದೇಶವನ್ನು ಬಳಸಿಕೊಂಡಿಲ್ಲ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳ ಪ್ರಗತಿ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗುತ್ತಿದೆ.
 - ರಮೇಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ರಾ.ಹೆ. ಉಪ ವಿಭಾಗ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next