Advertisement

ಗೆಲುವಿನ ಹಿಂದಿನ ಸೂತ್ರಧಾರ ಕಾರ್ಯತಂತ್ರ ನಿಪುಣ ಬನ್ಸಲ್

01:37 AM May 24, 2019 | Team Udayavani |

ಬಿಜೆಪಿ ಮತ್ತೆ ಹೆಚ್ಚು ಸ್ಥಾನಗಳನ್ನು ಪಡೆದು ಸರ್ಕಾರ ರಚಿಸುವತ್ತ ಮುಖ ಮಾಡಿದ್ದು, ಇದಕ್ಕೆ ಪ್ರಮುಖ ಕಾರಣೀಕರ್ತ ಅಮಿತ್‌ ಶಾ ಅವರ ನಂಬಿಕಸ್ಥ ಬಂಟ ಸುನೀಲ್ ಬನ್ಸಲ್ ಎಂದು ಬಣ್ಣಿಸಲಾಗುತ್ತಿದೆ. ಉತ್ತರ ಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಬನ್ಸಲ್ 2014ರ ಲೋಕಸಭಾ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಉತ್ತಮ ಕ್ಷೇತ್ರಗಳಿಗೆ ಹೊಂದಿಸುವಲ್ಲಿ ಮತ್ತು ಉತ್ತಮ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡು ಸಂಘಟಿಸುವಲ್ಲಿ ಯಶಸ್ವಿಯಾಗುವ ಮೂಲಕ ಮೋದಿ, ಶಾ ನಂಬಿಕೆಯನ್ನು ಗಳಿಸಿಕೊಂಡಿದ್ದರು. 2017ರ ಅಸೆಂಬ್ಲಿ ಚುನಾವಣೆಯಲ್ಲಿಯೂ ಬನ್ಸಲ್ ಕಾರ್ಯತಂತ್ರವು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸುವಲ್ಲಿ ನೆರವಾಗಿತ್ತು.

Advertisement

1989ರಲ್ಲಿ ರಾಜಸ್ಥಾನ್‌ ವಿವಿ ಎಬಿವಿಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬನ್ಸಲ್ ಅವರನ್ನು ಗುರುತಿಸಿದ್ದ ಅಮಿತ್‌ ಶಾ, 2014ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮತಗಟ್ಟೆಗಳ ನಿರ್ವಹಣೆ ಮತ್ತು ಗ್ರಾಮಾಂತರ ಪ್ರದೇಶದ ನೇತೃತ್ವವನ್ನು ವಹಿಸಿಕೊಟ್ಟಿದ್ದರು. ತಮ್ಮ ಕಾರ್ಯನೈಪುಣ್ಯತೆ ಹಾಗೂ ರಾಜಕೀಯ ತಂತ್ರಗಾರಿಕೆಯಿಂದ ಅಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನ ಗಳಿಸುವಂತೆ ಮಾಡಿದ ಬನ್ಸಲ್, ಅಮಿತ್‌ಶಾರ ನೆಚ್ಚಿನ ಶಿಷ್ಯರಾದರು. ಈ ಚುನಾವಣೆಯಲ್ಲಿ ಬಿಜೆಪಿಯ ಸಾಮಾಜಿಕ ಮಾಧ್ಯಮ ಘಟಕದಲ್ಲಿ ಕಾರ್ಯತಂತ್ರ ರೂಪಿಸಿ, ನಗರ ಪ್ರದೇಶದ ಮತ ಸೆಳೆಯಲೂ ಅವರು ಕಾರಣರಾದರು.

Advertisement

Udayavani is now on Telegram. Click here to join our channel and stay updated with the latest news.

Next