Advertisement
ಅದೇ, ಅಂತಾರಾಷ್ಟ್ರೀಯ ಖ್ಯಾತಿಯ ಬನ್ನೇರುಘಟ್ಟ ಜೈವಿಕ ಉದ್ಯಾನವನ. ಇಂತಹ ತಾಣಕ್ಕೆ ಬರುವ ಪ್ರವಾಸಿಗರನ್ನು ವಿಶ್ವ ಪ್ರವಾಸೋದ್ಯಮ ದಿನ ಸ್ವಾಗತ ಕೋರು ತ್ತಿರುವುದು ಮಾತ್ರ ನೀರು ತುಂಬಿದ ಹೊಂಡಗಳು ಎನ್ನುವುದೇ ಸದ್ಯದ ಸ್ಥಿತಿ. ರಸ್ತೆ ದುರಸ್ಥಿಗಾಗಿ ಹಲವು ವರ್ಷಗಳಿಂದ ಮನವಿ, ಆಗ್ರಹ ಮಾಡಿದರೂ ರಸ್ತೆ ಪ್ರಗತಿ ಕಂಡಿಲ್ಲ ಎನ್ನುವುದೇ ಪ್ರವಾ ಸೋದ್ಯಮ ಇಲಾಖೆ ಕಾರ್ಯವೈಖರಿಗೆ ಸಾಕ್ಷಿ.
Related Articles
Advertisement
ಜನಪ್ರತಿನಿಧಿಗಳ ಮೌನ: ಬನ್ನೇರುಘಟ್ಟ ದ್ಯಾನವನ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಇಲ್ಲಿಗೆ ಬಿಜೆಪಿಯ ಎಂ.ಕೃಷ್ಣಪ್ಪ ಶಾಸಕರಾದರೆ, ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಸಂಸದರಾಗಿದ್ದಾರೆ. ತಮ್ಮ ಅವಧಿಯಲ್ಲಿ ಉದ್ಯಾನವನಕ್ಕೆ ಭೇಟಿ ನೀಡಿ ಸಮಸ್ಯೆ ತಿಳಿಯುವ ಗೋಜಿಗೆ ಹೋಗಿದ್ದಿಲ್ಲ. ರಸ್ತೆ ಕಾಮಗಾರಿಗೆ ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂಬ ಆರೋಪಗಳಿವೆ.
4 ಕೋಟಿ ಮೀಸಲು: ಕಳೆದ ಐದಾರು ವರ್ಷಗಳ ಮನವಿ, ಬೇಡಿಕೆಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಬನ್ನೇರುಘಟ್ಟ ವೃತ್ತದಿಂದ ಉದ್ಯಾನವನದ ವರೆಗಿನ 1.5 ಕಿ.ಮೀ ರಸ್ತೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ 4 ಕೋಟಿ ರೂ., ಮೀಸಲಿಟ್ಟಿದ್ದು ಆನೇಕಲ್ ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿದೆ. ಅಧಿಕಾರಿಗಳು ಟೆಂಡರ್ ಕರೆದು ಕಾಮಗಾರಿಯನ್ನು ಕಳೆದ 3 ತಿಂಗಳ ಹಿಂದೆಯೇ ಆರಂಭಿಸಿದ್ದಾರೆ. ಆದರೂ ಕೆಲಸ ಮಾತ್ರ ನಿಂತ ನೀರಿನಂತಾಗಿದೆ.
ಸ್ಥಳೀಯರ ಅಸಹಕಾರ: ರಸ್ತೆ ಅಭಿವೃದ್ಧಿಗೆ ಅದರಲ್ಲೂ ಗ್ರಾಮದೊಳಗಿನ ರಸ್ತೆ ಅಭಿವೃದ್ಧಿ ಮಾಡಬೇಕಾದರೆ ಸ್ಥಳೀಯ ಜನ ಪ್ರತಿನಿಧಿಗಳ ಸಹಕಾರ ಮುಖ್ಯ. ಇಲ್ಲಿನ ಜನ ಪ್ರತಿನಿಧಿಗಳಿರಲಿ ರಸ್ತೆ ಪಕ್ಕದ ಮನೆಗಳವರು, ಅಂಗಡಿಯವರು ಸ್ಪಂದಿಸುತ್ತಿಲ್ಲ ಎಂಬುದು ಗುತ್ತಿಗೆದಾರರು, ಅಧಿಕಾರಿಗಳ ಅಳಲು.
ಸ್ಥಳೀಯರ ಆಕ್ರೋಶ: ಯುವ ಮುಖಂಡ ನಂದಕುಮಾರ್, ಕೆಲ ವರ್ಷಗಳಿಂದ ಉದ್ಯಾನವನದ ರಸ್ತೆ ಹದಗೆಟ್ಟಿದೆ. ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ. ಇತ್ತೀಚಿಗೆ ಗುಂಡಿಗಳಲ್ಲಿ ನೀರು ನಿಂತು ಹೊಂಡಗಳಾಗಿ ಬಿಟ್ಟಿದೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ರಸ್ತೆ ಅಭಿವೃದ್ಧಿಪಡಿಸದಿದ್ದರೆ ರಸ್ತೆ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶೀಘ್ರ ರಸ್ತೆ ಕಾಮಗಾರಿ ಮುಗಿಸುವ ಭರವಸೆಬನ್ನೇರುಘಟ್ಟ ವೃತ್ತದಿಂದ ಉದ್ಯಾನವನದ ವರೆಗಿನ 1.5 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ 4 ಕೋಟಿ ರೂ. ಮಂಜೂರು ಮಾಡಿದೆ. ಗುತ್ತಿಗೆದಾರರು ಕೆಲಸ ಆರಂಭಿಸಿದ್ದರೆ, ಕೆಲ ಸಣ್ಣ ಪುಟ್ಟ ತೊಡಕುಗಳಿಂದ ಕಾಮಗಾರಿ ನಿಧಾನವಾಗುತ್ತಿದೆ. ಆದರೂ, ಅದಷ್ಟು ಬೇಗ ಕಾಮಗಾರಿ ಮುಗಿಸಲಾಗುತ್ತದೆ. 4 ತಿಂಗಳ ಹಿಂದೆಯೇ ಉದ್ಯಾನವವನದ ರಸ್ತೆ ಅಭಿವೃದ್ಧಿ ಪ್ರಕ್ರಿಯೆ ಆರಂಭವಾಗಿತ್ತು. 2 ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿದೆ. 300 ಮೀಟರ್ ಮೋರಿ ನಿರ್ಮಾಣವಾಗಿದೆ. ರಸ್ತೆ ಒಂದು ಕಡೆ 100 ಮರಗಳಿವೆ, ಮತ್ತೂಂದು ಕಡೆ 82 ಮರಗಳಿವೆ. ಮರ ತೆರವು ಆಗದೆ ಮೋರಿ ನಿರ್ಮಾಣ ಮಾಡಲು ಆಗುತ್ತಿಲ್ಲ. ಮೋರಿ ನಿರ್ಮಿಸದೆ ರಸ್ತೆ ಅಭಿವೃದ್ಧಿ ಸಾಧ್ಯವಿಲ್ಲ. ಸದ್ಯ ಅರಣ್ಯ ಇಲಾಖೆಗೆ ಮರ ತೆರವು ಮಾಡಲು ಮನವಿ ಮಾಡಲಾಗಿದೆ ಇಲಾಖೆ ಸ್ಥಳ ಮಹಜರ್ ಮಾಡಿದ್ದಾರೆ. ಅವರ ಸೂಚನೆಗೆ ನಾವು ಕಾಯುತ್ತಿದ್ದೇವೆ. ಇನ್ನೂ ದೂರವಾಣಿ ಇಲಾಖೆ, ವಿದ್ಯುತ್ ಇಲಾಖೆ ಸಹಕಾರವೂ ನಮಗೆ ಬೇಕಿದೆ ಎಂದು ಆನೇಕಲ್ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಯತಿರಾಜ್ “ಉದಯವಾಣಿ’ಗೆ ತಿಳಿಸಿದರು. ಮಂಜುನಾಥ ಎನ್.ಬನ್ನೇರುಘಟ್ಟ