Advertisement

Bannerghatta Park: ಬನೇರುಘಟ್ಟದಲ್ಲಿ ಕಿತ್ತಾಡಿಕೊಂಡು 15 ಜಿಂಕೆ ಸಾವನ್ನಪ್ಪಿರುವ ಶಂಕೆ

12:24 PM Sep 21, 2023 | Team Udayavani |

ಆನೇಕಲ್‌: ಬನ್ನೇರುಘಟ್ಟ ಪಾರ್ಕ್‌ನಲ್ಲಿ ಚಿರತೆ ಬಳಿಕ ಈಗ ಜಿಂಕೆ ಸಾವನ್ನಪ್ಪಿದೆ. ಬೆಕ್ಕಿನಿಂದ ಹರಡುವ ಫೆಲೈನ್‌ ಫ್ಯಾನ್‌ ಲ್ಯುಕೋಪೆನಿಯಾ ಎಂಬ ವೈರಸ್‌ ಕಾಣಿಸಿಕೊಂಡು 7 ಚಿರತೆ ಮರಿಗಳ ಸಾವಿಗೀಡಾದ ಬೆನ್ನಲ್ಲೇ 15 ಜಿಂಕೆಗಳು ಮೃತಪಟ್ಟಿವೆ.

Advertisement

ಸೇಂಟ್‌ ಜಾನ್‌ ಆಸ್ಪತ್ರೆ ಬಳಿ ಸಾಕಲಾಗಿದ್ದ ಜಿಂಕೆಗಳನ್ನು ಸೂಕ್ತ ಪೋಷಣೆ ಇಲ್ಲವೆಂದು ಬನ್ನೇರುಘಟ್ಟ ಪಾರ್ಕ್‌ಗೆ ತರಲಾಗಿತ್ತು. 37 ಜಿಂಕೆಗಳಲ್ಲಿ ಈಗಾಗಲೇ 15 ಜಿಂಕೆಗಳು ಸಾವನ್ನಪ್ಪಿವೆ. ಬೇರೆಡೆಯಿಂದ ತಂದ ಪ್ರಾಣಿಗಳನ್ನು ಕನಿಷ್ಠ ಒಂದು ತಿಂಗಳು ಕ್ವಾರಂಟೈನ್‌ ಮಾಡಬೇಕಿತ್ತು. ಆರೋಗ್ಯ ಸೇರಿದಂತೆ, ಆಹಾರ, ಔಷಧೋಪಚಾರ ಬಗ್ಗೆ ನಿಗಾ ವಸಬೇಕಾಗಿತ್ತು. ಆದರೆ, ಜಿಂಕೆಗಳ ಬಗ್ಗೆ ಕಾಳಜಿ ವಹಿಸದ ಕಾರಣ ಒಂದಕ್ಕೊಂದು ಕಿತ್ತಾಡಿಕೊಂಡು ಜತೆಗೆ ಸರಿಯಾದ ಆಹಾರ ಜಿಂಕೆಗಳಿಗೆ ಸಿಗದ ಹಿನ್ನೆಲೆಯಲ್ಲಿ ಕರುಳಿನ ಮೇಲೆ ಹೆಚ್ಚಿನ ಪ್ರಭಾವ ಬೀರಿ ಜಿಂಕೆಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬನ್ನೇರುಘಟ್ಟ ಪಾರ್ಕ್‌ ನಿರ್ದೇಶಕ ಸೂರ್ಯಸೇನ್‌, ಬೆಂಗಳೂರಿನ ಸೆಂಟ್‌ ಜೋನ್ಸ್‌ ಬಳಿ ಇದ್ದ ಜಿಂಕೆಗಳನ್ನು ಬನ್ನೇರುಘಟ್ಟಕ್ಕೆ ತರಲಾಗಿತ್ತು. ಎರಡು ಜಿಂಕೆಗಳು ಇಲ್ಲಿಗೆ ಬರುವ ಸಂದರ್ಭದಲ್ಲಿ ಸಾವನ್ನಪ್ಪಿದ್ದವು. ಉಳಿದ ಜಿಂಕೆಗಳನ್ನು ಬನ್ನೇರುಘಟ್ಟದ ಸಸ್ಯಹಾರಿ ಕೇಂದ್ರದ ಬಳಿ ಬಿಡಲಾಗಿತ್ತು. ಈ ವೇಳೆ ಕೆಲ ಜಿಂಕೆಗಳು ಒಂದಕ್ಕೊಂದು ಕಿತ್ತಾಡಿಕೊಂಡು ಮೃತಪಟ್ಟಿವೆ. ಜತೆಗೆ ಬೆಂಗಳೂರಿನಲ್ಲಿ ಅವುಗಳು ಪ್ರತಿದಿನ ಬೇರೆ ರೀತಿಯ ಆಹಾರಗಳನ್ನು ಸೇವಿಸುತ್ತಿದ್ದವು. ಇಲ್ಲಿ ಕಾಡಿನಲ್ಲಿನ ಆಹಾರಕ್ಕೆ ಹೊಂದಿಕೊಳ್ಳದೆ ಈ ಅವಘಡ ಆಗಿರುವ ಸಾಧ್ಯತೆ ಇದೆ. ಈಗಾಗಲೇ ಮೃತಪಟ್ಟ ಜಿಂಕೆಗಳ ಸ್ಯಾಂಪಲ್‌ ಪಶು ವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ.

ಪಾರ್ಕ್‌ನಲ್ಲಿ ವೈರಸ್‌ನಿಂದ 7 ಚಿರತೆಗಳು ಸಾವನ್ನಪ್ಪಿರುವುದು ಗೊತ್ತಾಗಿದೆ. ಈಗ 15 ಜಿಂಕೆ ಸಾವನ್ನಪ್ಪಿವೆ. ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಬೆಂಗಳೂರಿನಿಂದ ಜಿಂಕೆಗಳನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿತ್ತು. ಅವುಗಳಲ್ಲಿ 15 ಜಿಂಕೆಗಳು ಮೃತಪಟ್ಟಿದ್ದು, ಅಧಿಕಾರಿಗಳಿಂದ ಮಾಹಿತಿ ಕೇಳಲಾಗಿದೆ. -ಈಶ್ವರ ಖಂಡ್ರೆ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next