Advertisement
ಅವುಗಳು ಏ.1ರ ನಂತರ ನಾಲ್ಕು ಪ್ರಮುಖ ಬ್ಯಾಂಕ್‌ಗಳಾಗಿ ಪರಿವರ್ತನೆಗೊಂಡು, ಕಾರ್ಯಾಚರಿಸಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ.
ಮತ್ತೂಂದು ನಿರ್ಧಾರದಲ್ಲಿ 2013ರ ಕಂಪನಿ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಒಟ್ಟು 72 ತಿದ್ದುಪಡಿಗಳಿಗೆ ಸಮ್ಮತಿ ಸೂಚಿಸಲಾಗಿದೆ.
Related Articles
ಮತ್ತೂಂದು ಮಹತ್ವದ ನಿರ್ಧಾರದಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮಾರಬೇಕು ಎಂಬ ಇರಾದೆಯಲ್ಲಿರುವ ಸರ್ಕಾರ ಅನಿವಾಸಿ ಭಾರತೀಯರಿಗೆ ಶೇ.100ರಷ್ಟು ಷೇರುಗಳನ್ನು ಹೊಂದುವ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದೆ. ವಿಮಾನ ಸಂಸ್ಥೆಯ ಮಾರಾಟ ಪ್ರಕ್ರಿಯೆಯ ಪೈಕಿ ಇದೊಂದು ಮೈಲುಗಲ್ಲು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
Advertisement
ಇದುವರೆಗೆ ಶೇ.49ರಷ್ಟು ಪಾಲು ಖರೀದಿಗೆ ಮಾತ್ರ ಎನ್‌ಆರ್‌ಐಗಳಿಗೆ ಅವಕಾಶ ಇತ್ತು. ಈಗ ಶೇ.100ರಷ್ಟು ಷೇರು ಹೊಂದಲು ಅವಕಾಶವಿದ್ದು, ಇದರಿಂದ ಗಣನೀಯ ಮಾಲೀಕತ್ವ ಮತ್ತು ಪ್ರಧಾನ ನಿಯಂತ್ರಣ (ಎಸ್‌ಒಇಸಿ) ನಿಯಮಗಳಿಗೆ ಅಡ್ಡಿಯಾಗುವುದಿಲ್ಲ ಮತ್ತು ಎನ್‌ಆರ್‌ಐ ಹೂಡಿಕೆಯನ್ನು ದೇಶಿಯ ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ ಎಂದಿದ್ದಾರೆ ಜಾವಡೇಕರ್.