Advertisement

ಭಾರತ್‌ ಬ್ಯಾಂಕಿಗೆ ಬ್ಯಾಂಕೊ ಪುರಸ್ಕಾರ-2018 ಪ್ರದಾನ

03:38 PM Jan 19, 2019 | |

ಮುಂಬಯಿ: ಬ್ಯಾಂಕೊ ಗ್ಯಾಲಕ್ಸಿ ಇನ್ಮ ಸಂಸ್ಥೆಯು ಮುಂಬಯಿ ಹೊರ ವಲಯದ ಕರ್ಜತ್‌ನ  ರಾಡಿಸನ್‌ ಬುÉ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಆಲ್‌ ಇಂಡಿಯಾ ಕೋ ಆಪರೇಟಿವ್‌ ಬ್ಯಾಂಕಿಂಗ್‌ ಕಾನ್ಫರೆನ್ಸ್‌ ಮತ್ತು ಬ್ಯಾಂಕೊ ಬ್ಲೂ ರಿಬನ್‌ ಆರ್ಥಿಕ ಸಮಾವೇಶದಲ್ಲಿ ಜ. 17ರಂದು ನಡೆದ ಸಮಾರಂ ಭದಲ್ಲಿ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಲಿಮಿಟೆಡ್‌ನ‌ ಗತ ಸಾಲಿನ 5, 000 ರೂ. ಗಳಿಗಿಂತ ಅಧಿಕ ಗ್ರಾಹಕ ಸ್ನೇಹಿ ವ್ಯವಹಾರಕ್ಕಾಗಿ “ಬ್ಯಾಂಕೊ ಪುರಸ್ಕಾರ 2018′ ಪ್ರದಾನಿಸಿ ಗೌರವಿಸಿ ಅಭಿನಂದಿಸಿತು.

Advertisement

ರಾಡಿಸನ್‌ ಬುÉ ಲಾವ್‌°ನಲ್ಲಿ ನಡೆಸಲ್ಪಟ್ಟ ಅಖೀಲ ಭಾರತ ಸಹಕಾರಿ ಪಥಸಂಸ್ಥೆಗಳ ಎಡ್ವಾಂಟೇಜ್‌ ಆ್ಯನ್ಯುವಲ್‌ ಸಮಿಟ್‌ ಆ್ಯಂಡ್‌ ಬ್ಯಾಂಕೊ ಬ್ಲೂ ರಿಬನ್‌ ಸೆರೆಮನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದ ಉಪಸ್ಥಿತ ಕೊಟಾಕ್‌ ಮಹೀಂದ್ರಾ ಬ್ಯಾಂಕ್‌ ಲಿಮಿಟೆಡ್‌ನ‌ ಅನುಸರಣಾ ವಿಭಾಗದ ಮುಖ್ಯಸ್ಥ ಟಿ. ವಿ. ಸುಧಾಕರ ಅವರು ಗ್ಯಾಲಕ್ಸಿ ಇನ್ಮ ಸಂಸ್ಥೆಯ ನಿರ್ದೇಶಕ ಅಶೋಕ್‌ ನಾಯ್ಕ ಮತ್ತು ಬ್ಯಾಂಕೋ ಸಂಪಾದಕ ಅವಿನಾಶ್‌ ಶಿಂತ್ರೆ ಉಪಸ್ಥಿತಿಯಲ್ಲಿ ಭಾರತ್‌ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ  ರೋಹಿಣಿ ಜೆ. ಸಾಲ್ಯಾನ್‌, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ, ಪ್ರಧಾನ ಪ್ರಬಂಧಕ‌ ದಿನೇಶ್‌ ಬಿ. ಸಾಲ್ಯಾನ್‌ ಅವರಿಗೆ ಪುರಸ್ಕಾರ ಫಲಕ, ಗೌರವಪತ್ರ ಪ್ರದಾನಿಸಿ ಶುಭಹಾರೈಸಿದರು.

ಪುರಸ್ಕಾರ ತೀರ್ಪುಗಾರರಾದ ಅತುಲ್‌ ಖೇದಡ್ಕರ್‌, ಅವಿನಾಶ್‌ ಜೋಶಿ, ವಿವೇಕ್‌ ಮಹರ್ಶಿ, ಉದ್ಯಮಿ ಪ್ರದೀಪ್‌ ದೇಸಾಯಿ  ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ, ಮಹಾರಾಷ್ಟ್ರ ಹಾಗೂ ದೇಶದ ನಾನಾ ರಾಜ್ಯ, ಜಿಲ್ಲೆಗಳ ಆಯ್ದ ವಿವಿಧ ಬ್ಯಾಂಕ್‌ಗಳು ಪುರಸ್ಕಾರಕ್ಕೆ ಪಾತ್ರವಾಗಿದ್ದು, ಆಯಾ ಬ್ಯಾಂಕ್‌ನ ಮುಖ್ಯಸ್ಥರು ಪ್ರಶಸ್ತಿಗಳನ್ನು ಸ್ವೀಕರಿಸಿದರು. 

ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next