ಮಂಗಳೂರು: ಬ್ಯಾಂಕ್ ರಾಷ್ಟ್ರೀಕರಣ ಮೂಲಕ ಬ್ಯಾಂಕಿಂಗ್ ಸೇವೆಯು ಜನಸಾಮಾನ್ಯರಿಗೆ ತಲುಪಿ ದಂತಾಗಿದೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ನಿರ್ವಹಣ ನಿರ್ದೇಶಕ ಮತ್ತು ಪೂನಾ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ ಮಾಜಿ ನಿರ್ದೇಶಕ ಆಲೆನ್ ಸಿ. ಪಿರೇರಾ ಅಭಿಪ್ರಾಯಪಟ್ಟರು.
“ರಾಷ್ಟ್ರೀಕರಣದ ಮೊದಲು ಮತ್ತು ಅನಂತರ ಬ್ಯಾಂಕಿಂಗ್’ ಎಂಬ ವಿಷಯದ ಮೇಲೆ ಸಂತ ಆಲೋ ಶಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಶುಕ್ರವಾರ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾ ಟಿಸಿ ಅವರು ಮಾತನಾಡಿದರು.
ಬ್ಯಾಂಕಿಂಗ್‌ನಲ್ಲಿ ದಿವಾಳಿತನ ಮತ್ತು ದಿವಾಳಿತನದ ಹಲವಾರು ಪ್ರಕರಣಗಳಿಂದಾಗಿ ಬೆಳವಣಿಗೆಯ ದರವು ಕುಂಠಿತವಾಯಿತು. ಭಾರತೀಯ ಆರ್ಥಿಕತೆಯು ಅತಿವೇಗ ವಾಗಿ ಬೆಳೆಯುತ್ತಿದ್ದು, ಅದರಲ್ಲಿ ಹಲ ವಾರು ಅವಕಾಶಗಳಿವೆ. ರಾಷ್ಟ್ರೀಕೃತ ಬ್ಯಾಂಕುಗಳು ಎದುರಿಸುತ್ತಿರುವ ಸವಾಲುಗಳೆಂದರೆ ಅನೈತಿಕತೆ ಮತ್ತು ದುರಾಡಳಿತಗಳಾಗಿವೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ|ಡಾ| ಪ್ರಾವೀಣ್ ಮಾರ್ಟಿಸ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ನೂತನ ಪ್ರಯೋಗಗಳಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರ ದಲ್ಲಿ ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಉದಯೋನ್ಮುಖ ಪ್ರತಿಭೆ ಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ. ಆದ್ದರಿಂದ ವಿದ್ಯಾರ್ಥಿ ಗಳು ಬ್ಯಾಂಕಿಂಗ್ ಕ್ಷೇತ್ರವನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆಮಾಡಿ, ನಿಮ್ಮ ಪ್ರತಿಭೆಯನ್ನು ಬೆಳಗಿ ಎಂದರು.
ಪ್ರಸಿದ್ಧ ಅರ್ಥಶಾಸ್ತ್ರಜ್ಞ , ಸಂಶೋಧಕ ಡಾ| ಜಿ.ವಿ. ಜೋಷಿ, ವಿ.ವಿ.ಯ ಎಂಬಿಎ ವಿಭಾಗದ ಪ್ರಾಧ್ಯಾಪಕ ಡಾ| ಟಿ. ಮಲ್ಲಿಕಾರ್ಜುನಪ್ಪ, ಸಾಮಾಜಿಕ ಕಾರ್ಯಕರ್ತ, ಕಾರ್ಪೊರೇಷನ್ ಬ್ಯಾಂಕಿನ ಮಾಜಿ ನಿರ್ದೇಶಕ ಟಿ.ಆರ್. ಭಟ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ನಿಕೋಲ್ ಸೆರಾವೊ ನಿರೂಪಿಸಿದರು. ಡಾ| ನೋರ್ಬರ್ಟ್ ಲೋಬೋ ಸ್ವಾಗ ತಿಸಿ, ಡಾ| ಪ್ರಿಯಾ ಶೆಟ್ಟಿ ವಂದಿಸಿದರು.