Advertisement

ಬ್ಯಾಂಕಿಂಗ್‌ ಪರೀಕ್ಷೆ : ಮೊದಲ ಹಂತದಿಂದಲೇ ಇರಲಿ ತಯಾರಿ

09:56 PM Jan 28, 2020 | mahesh |

ಬ್ಯಾಂಕ್‌ ಸಿಬಂದಿ ನೇಮಕಾತಿಗಾಗಿ ಐಬಿಪಿಎಸ್‌ 2020-21ರ ತಾತ್ಕಾಲಿಕ ಕ್ಯಾಲೆಂಡರ್‌ ಬಿಡುಗಡೆ ಗೊಳಿಸಿದೆ. ಈಗಾಗಲೇ ಎಸ್‌ಬಿಐ, ಆರ್‌ಬಿಐ ಸೇರಿದಂತೆ ಹಲವಾರು ಬ್ಯಾಂಕ್‌ಗಳು ನಾನಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು ವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಅರ್ಹತೆ, ಆಯ್ಕೆ ಪ್ರಕ್ರಿಯೆ ಅರ್ಜಿ ಸಲ್ಲಿಕೆ ಕುರಿತಾದ ಮಾಹಿತಿ ಪ್ರಕಟವಾಗಿತ್ತು, ಐಬಿಪಿಎಸ್‌ ಪರೀಕ್ಷೆ ವಿಧಾನ ಅಂಕ ಹಂಚಿಕೆ, ಪಾಲಿಸಬೇಕಾದ ಸಲಹೆ ಗಳೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Advertisement

ಪರೀಕ್ಷೆಗೆ ಸೆಕ್ಷನ್‌ ವೈಸ್‌ ತಯಾರಿ
ಅಧ್ಯಯನಕ್ಕೆ ತಯಾರಿಯ ಮೊದಲ ಹಂತವಾಗಿ, ಪರೀಕ್ಷೆಯ ಮಾದರಿ ಮತ್ತು ಅದರ ಪಠ್ಯ ಕ್ರಮ ತಿಳಿದುಕೊಳ್ಳಬೇಕು. ಪಠ್ಯಕ್ರಮವನ್ನು ಒಮ್ಮೆ ನೋಡಿಕೊಂಡರೆ ಯಾವ ವಿಷಯಕ್ಕೆ ಹೆಚ್ಚು ಒತ್ತು ನೀಡಬೇಕು, ಕಲಿಕೆಗೆ ಹೇಗೆ ಯೋಜನೆ ರೂಪಿಸಿಕೊಳ್ಳಬೇಕು ಎಂಬುದು ತಿಳಿಯುತ್ತದೆ. ಈ ಪರೀಕ್ಷೆಯಲ್ಲಿ ಕಟ್‌ ಆಫ್ ಅಂಕಗಳು ಪಡೆದವರು ಮುಖ್ಯ ಪರೀಕ್ಷೆಗೆ ಆಯ್ಕೆ ಆಗುತ್ತಾರೆ.

ಇಂಗ್ಲಿಷ್‌ ಭಾಷೆ ತಯಾರಿ
30 ಅಂಕಗಳಿಗೆ 30 ಪ್ರಶ್ನೆಗಳು ಇರುತ್ತವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ ಶಬ್ದ ಕೋಶ, ಬೇಸಿಕ್‌ ಇಂಗ್ಲಿಷ್‌ ವ್ಯಾಕರಣ, ಕಾಂಪ್ರ ಹೆನ್ಸ್ ನ್‌, ತಪ್ಪುಗಳ ತಿದ್ದುವಿಕೆ, ಕ್ಲೋಸ್‌ ಟೆಸ್ಟ್ ಬಗ್ಗೆ ತಿಳಿದುಕೊಳ್ಳಬೇಕು. ದಿನನಿತ್ಯ ಇಂಗ್ಲಿ ಷ್‌ ನ್ಯೂಸ್‌ ಪೇಪರ್‌ ಓದುವುದು ಮತ್ತು ಮುಖ್ಯ ಅಂಶಗಳನ್ನು, ಹೊಸ ಪದಗಳನ್ನು ನೋಟ್‌ ಮಾಡಿಕೊಳ್ಳಬೇಕು. ಅವುಗಳ ಅರ್ಥ ತಿಳಿದುಕೊಳ್ಳಬೇಕು. ಇದರಿಂದ ಇಂಗ್ಲಿಷ್‌ ಓದುವಿಕೆಯ ವೇಗವು ಹೆಚ್ಚುತ್ತದೆ. ಜತೆಗೆ ಗ್ರಾಮರ್‌ ಪುಸ್ತಕಗಳು, ಗ್ರಾಮರ್‌ ಟೀಚಿಂಗ್‌ ವೀಡಿಯೋಗಳನ್ನು ನೋಡಿ ಅಭ್ಯಾಸ ಮಾ ಡುವುದು ಒಳಿತು. ಪ್ರಶ್ನೆ ಪತ್ರಿಕೆಗಳನ್ನು ದಿನ ನಿತ್ಯ ಪ್ರ್ಯಾಕ್ಟೀಸ್‌ ಮಾಡಬೇಕು. ಹಿಂದಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಬಗೆ ಹರಿಸಿದ ವೀಡಿಯೋ ಯುಟ್ಯೂಬ್‌ನಲ್ಲಿ ಲಭ್ಯ ವಾಗುತ್ತವೆ.

ಸಂಖ್ಯಾತ್ಮಕ ಸಾಮರ್ಥ್ಯ
35 ಪ್ರಶ್ನೆಗಳಿಗೆ 35 ಅಂಕಗಳನ್ನು ನಿಗದಿ ಮಾಡಿದ್ದು, ಬ್ಯಾಂಕಿಗ್‌ ಪರೀಕ್ಷೆಯಲ್ಲಿ ಹೆಚ್ಚು ಕಷ್ಟಕರವಾದ ವಿಭಾಗವಿದು. ಅಸಂಖ್ಯಾಕ ಸೂತ್ರಗಳ ಅನ್ವಯಗಳನ್ನು ಇದು ಒಳಗೊಂಡಿ ರುತ್ತದೆ. ಪಠ್ಯಕ್ರಮ ಓದಿ ಕೊಂಡ ವರು ಈ ವಿಭಾಗಕ್ಕೆ ಸಂಬಂಧಿಸಿದ ಪ್ರತಿಯೊಂದು ಸೂತ್ರಗಳನ್ನು ಹೆಚ್ಚು ಅಭ್ಯಾಸ ಮಾಡಬೇಕು. ಸಂಖ್ಯಾತ್ಮಕ ಸಮಸ್ಯೆಗಳನ್ನು ಬಿಡಿಸಲು ಇರುವ ತಂತ್ರಗಾರಿಕೆ ಮತ್ತು ಸುಲಭ ದಾರಿಯನ್ನು ಸ್ನೇಹಿತರಿಂದ, ತಜ್ಞರಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಯಾವ ಮಾದರಿಯ ಪ್ರಶ್ನೆಗಳು ಕಷ್ಟವೆನಿಸುತ್ತವೋ ಅವುಗಳ ಕಡೆ ಹೆಚ್ಚು ಗಮನಹರಿಸಿ ಕಲಿಯಬೇಕು. ಈ ಪ್ರಶ್ನೆಪತ್ರಿಕೆ ಸಿಂಪ್ಲಿಫಿಕೇಶನ್‌, ಪರ್ಸೆಂಟೇಜ್‌, ಅನುಪಾತ, ಸಿಂಪಲ್‌ ಮತ್ತು ಕಾಂಪೌಡ್‌ ಇಂಟ್‌ರೆಸ್ಟ್, ಲಾಭ ಮತ್ತು ನಷ್ಟ, ಟೈಮ್‌ ಅಂಡ್‌ ವರ್ಕ್‌, ಸಂಖ್ಯೆ ಸರಣಿ, ಸಂಖ್ಯೆ ವ್ಯವಸ್ಥೆ, ಡೇಟಾ ವ್ಯಾಖ್ಯಾನ ಆಧಾರಿತ ಪ್ರಶ್ನೆಗಳು ಇರುತ್ತವೆ.

ರೀಸನಿಂಗ್‌ ಎಬಿಲಿಟಿ ಅಭ್ಯಾಸ
ಇತರ ವಿಭಾಗಗಳಿಗಿಂತ ಹೆಚ್ಚು ಸ್ಕೋರ್‌ ಮಾಡಬಹುದಾದ ವಿಭಾಗ. ಒಟ್ಟು 35 ಪ್ರಶ್ನೆಗಳಿಗೆ 35 ಅಂಕಗಳು ಇರುತ್ತವೆ. ಆದರೆ ಪ್ರತಿ ವಿಷಯದ ಹಿಂದಿರುವ ಲಾಜಿಕ್‌ ತಿಳಿದುಕೊಂಡಿರಬೇಕು. ಥಿಯರಿ ಏನು ಎಂಬುದನ್ನು ತಿಳಿದುಕೊಳ್ಳಲು ಅನುಕೂ ಲವಾಗುವ ರೀತಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ದಿನ ಪತ್ರಿಕೆ, ಅಂಕಣ, ಬರಹಗಳನ್ನು, ಸಂಪಾದಕೀಯ ಓದುವ ಅಭ್ಯಾಸ ಬೆಳಸಿಕೊಂಡರೆ ಥಿಯರಿ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ರೀಸನಿಂಗ್‌ ಎಬಿಲಿಟಿ ವಿಭಾಗದಲ್ಲಿ ರಕ್ತ ಸಂಬಂಧಗಳು, ಒಗಟುಗಳು, ರೇಖೀಯ ಮತ್ತು ವೃತ್ತಾಕಾರದ ಆಸನ ವ್ಯವಸ್ಥೆಗಳ ಕುರಿತು, ಕೋಡಿಂಗ್‌-ಡಿಕೋಡಿಂಗ್‌, ಡಿಸ್ಟಾ ನ್ಸ್‌ ಆ್ಯಂಡ್‌ ಡೈರೆಕ್ಷನ್‌, ಅನಾಲಜಿ ಮತ್ತು ಕ್ಲಾಸಿಫಿಕೇಶನ್‌, Syllogisms ವಿಷಯಗಳು ಸಾಮಾನ್ಯವಾಗಿವೆ.

Advertisement

ಸೂಚನೆ: ಇಲ್ಲಿರುವ ಮೂರು ಸೆಕ್ಷನ್‌ಗಳು ಮುಖ್ಯ ಪರೀಕ್ಷೆಯಲ್ಲೂ ಇರಲಿದ್ದು, ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಕಟ್‌ ಆಫ್ ಅಂಕದಲ್ಲಿ ಉತ್ತೀರ್ಣರಾದವರು ಮಾತ್ರ ಮೇನ್ಸ್‌ ಪರೀಕ್ಷೆಗೆ ಅರ್ಹರಾಗುತ್ತಾರೆ. ಒಟ್ಟು 100 ಅಂಕಗಳ ಪ್ರಶ್ನೆ ಪತ್ರಿಕೆ ಇದಾಗಿದ್ದು, ಅಭ್ಯರ್ಥಿ 1 ಗಂಟೆ ಅವಧಿಯಲ್ಲಿ ಆನ್‌ಲೈನ್‌ ಪರೀಕ್ಷೆ ಬರೆಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next