ಚಿಕ್ಕನಾಯಕನಹಳ್ಳಿ: ಪಟ್ಟಣದ ಬಿ.ಎಚ್ ರಸ್ತೆಯಪಕ್ಕದಲ್ಲಿರುವಕೆನರಾ ಬ್ಯಾಂಕ್‌ಕೊರೊನಾ2ನೇ ಆಲೆಸೃಷ್ಟಿಸಿದ್ದ ಅನಾಹುತ ಮರೆತಂತೆ ಕಾಣುತ್ತಿದ್ದು,ಸರ್ಕಾರ ನೀಡಿರುವ ಮಾರ್ಗಸೂಚನೆ ಗಾಳಿಗೆ ತೂರಿದಂತಿದೆ.
ಪ್ರತಿದಿನ ಬ್ಯಾಂಕ್ ಮುಂದೆಜನಜಂಗುಳಿಯಿಂದ ಕೂಡಿದ್ದು, ಬ್ಯಾಂಕ್ ಅಧಿಕಾರಿಗಳಿಗೂ ಕೊರೊನಾ ತಡೆಗಟ್ಟುವ ಬಗ್ಗೆಕಾಳಜಿ ಅವಶ್ಯಕವಾಗಿದೆ. ಕೊರೊನಾ ಸೋಂಕು ಯಾವ ಧರ್ಮ, ಜಾತಿ,ಅಧಿಕಾರಿ, ಬಡವ, ಶ್ರೀಮಂತ ಎಂದು ನೋಡದೇಪ್ರತಿಯೊಬ್ಬರಿಗೂ ಹರಡುತ್ತಿದ್ದು, ಕೊರೊನಾತಡೆಗಟ್ಟಲು ಆರೋಗ್ಯ ಇಲಾಖೆ, ಪೊಲೀಸ್ ಹಾಗೂಕಂದಾಯ ಇಲಾಖೆಯೇ ಮುಂದೆ ಬರಬೇಕು ಎಂಬಉದಾಸೀನ ಬಿಟ್ಟು ಪಟ್ಟಣದಲ್ಲಿನ ಬ್ಯಾಂಕ್‌ಅಧಿಕಾರಿಗಳು, ಬ್ಯಾಂಕ್‌ನ ಗ್ರಾಹಕರ ಆರೋಗ್ಯದಬಗ್ಗೆ ಕಾಳಜಿವಹಿಸಬೇಕು ಎಂದು ಪ್ರಜ್ಞಾವಂತನಾಗರಿಕರ ಅಭಿಪ್ರಾಯವಾಗಿದೆ.
ಗ್ರಾಹಕರ ಬಗ್ಗೆ ಕಾಳಜಿ ಮುಖ್ಯ: ಬ್ಯಾಂಕ್‌ಗಳುಗ್ರಾಹಕರ ಹಣದ ವಹಿವಾಟು ನಡೆಸುವ ಜೊತೆಗೆಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದುಅವಶ್ಯಕ.ಕೊರೊನಾ ಆರೋಗ್ಯದಲ್ಲಿ ತೀವ್ರ ತೊಂದರೆಉಂಟು ಮಾಡುವ ಕಾಯಿಲೆ ಆಗಿದೆ. ಬ್ಯಾಂಕ್‌ಅಧಿಕಾರಿಗಳು ಎಲ್ಲ ಗ್ರಾಹಕರನ್ನು ಒಟ್ಟಿಗೆ ತುಂಬಿಕೊಳ್ಳುವ ಬದಲು ಗ್ರಾಹಕರು ಇಂತಹ ಸಮಯಕ್ಕೆಇಂತಹ ಕೆಲಸಕ್ಕೆ ಬರುವ ಬಗ್ಗೆ ಸಮಯ ನೀಡುವಬಗ್ಗೆ ಆಲೋಚನೆ ಮಾಡಬೇಕಿದೆ.
ತಾಲೂಕಿನಲ್ಲಿ ಕೊರೊನಾ ಸಂಪೂರ್ಣ ಅಂತ್ಯಕಾಣುವವರೆಗೂ ಬ್ಯಾಂಕ್ ಅಧಿಕಾರಿಗಳು ಸೋಂಕುತಡೆಗಟ್ಟಲು ಕ್ರಮಕೈಗೊಳ್ಳಬೇಕಿದೆ. ಬ್ಯಾಂಕ್‌ಗಳುಕೊರೊನಾ ಉತ್ಪಾದನೆಯ ಕಾರ್ಖಾನೆ ಆಗದಿರಲಿಎಂಬುವುದೇ ಸಾರ್ವಜನಿಕರ ಆಶಯವಾಗಿದೆ.
ಚೇತನ್