Advertisement

ಆನ್‌ ಲೈನ್‌ ಗೇಮ್‌ಗಾಗಿ 2.36 ಕೋಟಿ ಹಣಕ್ಕೆ ಬ್ಯಾಂಕ್‌ ಸಿಬ್ಬಂದಿ ಕನ್ನ!

12:43 PM Feb 25, 2023 | Team Udayavani |

ಹಾವೇರಿ: ಆನ್‌ಲೈನ್‌ ಗೇಮ್‌ ಆಡಲು ನಗರದ ಐಸಿಐಸಿಐ ಬ್ಯಾಂಕ್‌ ಶಾಖೆಯ ಸಹಾಯಕ ವ್ಯವಸ್ಥಾಪಕ ಬರೋಬ್ಬರಿ 2.36 ಕೋಟಿ ರೂ. ದುರ್ಬಳಕೆ ಮಾಡಿಕೊಂಡ ಪ್ರಕರಣ ನಡೆದಿದೆ.

Advertisement

ಇದನ್ನೂ ಓದಿ:ಛತ್ತೀಸ್‌ ಗಢದಲ್ಲಿ ನಕ್ಸಲರ ಅಟ್ಟಹಾಸ: ಮೂವರು ಪೊಲೀಸ್ ಸಿಬ್ಬಂದಿಯ ಹತ್ಯೆ

ಡೆಪ್ಯೂಟಿ ಮ್ಯಾನೇಜರ್‌ ವೀರೇಶ ಕಾಶಿಮಠ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಗ್ರಾಹಕರು ಠೇವಣಿ ಇಟ್ಟಿದ್ದ ಹಣವನ್ನು ಸ್ನೇಹಿತನ ಬ್ಯಾಂಕ್‌ ಖಾತೆಗೆ 2022ರ ಆ.20ರಿಂದ ಇಲ್ಲಿಯವರೆಗೆ ಹಂತಹಂತವಾಗಿ ಒಟ್ಟು 2.36 ಕೋಟಿ ರೂ. ವರ್ಗಾವಣೆ ಮಾಡಿದ್ದು, ಈ ಹಣ ಬಳಸಿ ಆನ್‌ಲೈನ್‌ ಗೇಮ್‌ ಆಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಇಷ್ಟೊಂದು ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಬ್ಯಾಂಕ್‌ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ಆರೋಪಿ ವೀರೇಶ ಕಾಶಿಮಠನನ್ನು ಪೊಲೀಸರು ಬಂಧಿಸಿದ್ದು, ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಕೋಟಿ ರೂ. ಗೂ ಮೇಲ್ಪಟ್ಟ ಪ್ರಕರಣವಾದ್ದರಿಂದ ಇದನ್ನು ಸಿಐಡಿ ತನಿಖೆ ಮಾಡುತ್ತದೆ. ಒಂದೆರಡು ದಿನಗಳಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾತ್ತದೆ ಎಂದು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ|ಶಿವಕುಮಾರ ಗುಣಾರೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next