Advertisement

ಬ್ಯಾಂಕ್‌ ಆಫ್ ಬರೋಡಾಗೆ 1046 ಕೋಟಿ ರೂ. ನಷ್ಟ

06:34 PM May 29, 2021 | Team Udayavani |

ನವದೆಹಲಿ: ಕಳೆದ ಮಾರ್ಚ್‌ಗೆ ಅಂತ್ಯವಾದ ಹಣಕಾಸು ವರ್ಷದ ಕೊನೆಯ ತ್ರೈ ಮಾಸಿಕದಲ್ಲಿ 1,046 ಕೋಟಿ ರೂ. ನಷ್ಟ ಅನುಭವಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್ ಬರೋಡಾ (ಬಿಒಬಿ) ಘೋಷಿಸಿದೆ.

Advertisement

ಅದರ ಹಿಂದಿನ ವಿತ್ತೀಯ ವರ್ಷದ 4ನೇ ತ್ರೈ ಮಾಸಿಕದಲ್ಲಿ ಬ್ಯಾಂಕ್‌ 506.6 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ನಷ್ಟಕ್ಕೆ ಹೊಸ ತೆರಿಗೆ ಸ್ವರೂಪಕ್ಕೆ ಬದಲಾಗಿದ್ದು ಮತ್ತು ಡಿಟಿಎ ರಿವರ್ಸಲ್‌ ಕಾರಣ ಎಂದು ಬಿಒಬಿ ಹೇಳಿದೆ.

ಬ್ಯಾಂಕಿನ ಅನುತ್ಪಾದಕ ಆಸ್ತಿ (ಎನ್‌ಪಿಒ) ಶೇ.8.8ರಷ್ಟು ಹೆಚ್ಚಳವಾಗಿದೆ ಎಂದೂ ವರದಿಯಲ್ಲಿ ಬ್ಯಾಂಕ್‌ ಹೇಳಿದೆ.

ಇದನ್ನೂ ಓದಿ :ಜೂಜಾಟದ ಮಾಹಿತಿದಾರನನ್ನೇ ಥಳಿಸಿದ ಎಸೈ, ಬಾಯಲ್ಲಿ ಬೂಟು ಇಟ್ಟು ಅಮಾನವೀಯ ಕೃತ್ಯ

Advertisement

Udayavani is now on Telegram. Click here to join our channel and stay updated with the latest news.

Next