ಉಡುಪಿ: ಬ್ಯಾಂಕ್ ಆಫ್ ಬರೋಡದ 112ನೇ ಸಂಸ್ಥಾಪನ ದಿನಾಚರಣೆಯು ಬ್ಯಾಂಕಿನ ಪ್ರಾದೇಶಿಕ ಕಚೇರಿ ಉಡುಪಿ ಆಶ್ರಯದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಪ್ರಥಮ ಮಹಡಿಯಲ್ಲಿ ಶನಿವಾರ ನಡೆಯಿತು.
ಮಣಿಪಾಲ ಮಾಹೆಯ ಸಹಕುಲಾ ಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಬ್ಯಾಂಕಿಂಗ್ ಕ್ಷೇತ್ರದ ಕೊಡುಗೆ ಅಪಾರ. ಹೆತ್ತವರು ತಮ್ಮ ಮಕ್ಕಳಿಗೆ ಜೀವನಕ್ಕೆ ಬೇಕಾದಷ್ಟು ಹಣ ಗಳಿಸುವ ಉದ್ಯೋಗಕ್ಕೆ ಅವರನ್ನು ತಯಾರುಗೊಳಿಸು ವುದಲ್ಲದೆ, ಜೀವನದಲ್ಲಿ ಶಿಸ್ತು ಮತ್ತು ಸ್ವಚ್ಛತೆಯ ಬಗ್ಗೆಯೂ ತಿಳಿಹೇಳಬೇಕಾಗಿದೆ ಎಂದರು.
ಬ್ಯಾಂಕಿನ ವತಿಯಿಂದ ಡಾ| ಎಚ್.ಎಸ್. ಬಲ್ಲಾಳ್, ಇಂದಿರಾ ಬಲ್ಲಾಳ್ ದಂಪತಿ, ಕೆ.ಆರ್. ಶೆಣೈ, ಪದ್ಮಾ ಆರ್. ಶೆಣೈ ದಂಪತಿ ಮತ್ತು ಡಾ| ಜಿ. ಶಂಕರ್ ಅವರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ 6 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮೂರೂ ಬ್ಯಾಂಕುಗಳ ಸಂಸ್ಥಾಪಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಬ್ಯಾಂಕಿನ ಪ್ರಾದೇಶಿಕ ಕಚೇರಿ ಉಡುಪಿಯ ಮುಖ್ಯಸ್ಥ ರವೀಂದ್ರ ರೈ ಎಂ. ಸ್ವಾಗತಿಸಿ, ಬ್ಯಾಂಕ್ ಬೆಳೆದು ಬಂದ ದಾರಿ ಮತ್ತು ಸಾಧನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿನ್, ಸಹನಾ ನಿರೂಪಿಸಿದರು. ಸಹಾಯಕ ಪ್ರಾದೇಶಿಕ ಮುಖ್ಯಸ್ಥ ಗೋಪ ಕುಮಾರ್ ಜಿ. ವಂದಿಸಿದರು.
Advertisement
ಹಿಂದಿನ ವಿಜಯ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಶೆಣೈ ಅವರು ದಿಕ್ಸೂಚಿ ಭಾಷಣಗೈದು, ಗುಜರಾತ್‌ನಲ್ಲಿ 1908ರಲ್ಲಿ ಸ್ಥಾಪನೆಗೊಂಡ ಬ್ಯಾಂಕ್ ಆಫ್ ಬರೋಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ, ಬ್ಯಾಂಕ್ ಆಫ್ ಬರೋಡದೊಂದಿಗೆ ದೇನಾ ಬ್ಯಾಂಕ್, ವಿಜಯ ಬ್ಯಾಂಕ್ ವಿಲೀನಗೊಂಡಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
Related Articles
ಬಡವರಿಗೆ ಸಾಲ ನೀಡಿ
ಉದ್ಯಮಿ ಡಾ| ಜಿ. ಶಂಕರ್ ಮಾತನಾಡಿ, ವಿಜಯ ಬ್ಯಾಂಕ್ ಪ್ರಸ್ತುತ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಂಡಿದ್ದರೂ ಕರಾವಳಿ ಭಾಗದವರಿಗೆ ಇಂದಿಗೂ ವಿಜಯ ಬ್ಯಾಂಕ್ ಆಗಿಯೇ ಉಳಿದಿದೆ. ಮೂಲ್ಕಿ ಸುಂದರರಾಮ್ ಶೆಟ್ಟಿ ಅವರಿಂದ ಸ್ಥಾಪನೆಗೊಂಡ ವಿಜಯ ಬ್ಯಾಂಕ್ ಅವರ ಕನಸಿನಂತೆ ಬಡವರಿಗೆ ಸಹಾಯ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ. ಕಡು ಬಡವರು, ಮಹಿಳೆಯರಿಗೆ ಸಾಲ ನೀಡಿದಾಗ ಅವರು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಾರೆ. ಈ ನೆಲೆಯಲ್ಲಿ ಬ್ಯಾಂಕ್ ಬಡವರಿಗೆ ಸಾಲ ನೀಡಬೇಕಾಗಿದೆ ಎಂದರು.
Advertisement