Advertisement

“ಬ್ಯಾಂಕ್‌ ವಿಲೀನದಿಂದ ಅಭಿವೃದ್ಧಿಗೆ ಹೊಡೆತ’

11:53 PM Feb 07, 2020 | Team Udayavani |

ಮಂಗಳೂರು: ಬ್ಯಾಂಕ್‌ ವಿಲೀನದಿಂದಾಗಿ ಕರಾವಳಿಯ ಅಭಿವೃದ್ಧಿಗೆ ಹೊಡೆತ ಬೀಳುವ ಸಾಧ್ಯತೆ ಇದ್ದು, ಕೇಂದ್ರ ಸರಕಾರ ಈ ನಿಲುವಿನ ಬಗ್ಗೆ ವಿಮರ್ಶೆ ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ಕರಾವಳಿಯ ಬ್ಯಾಂಕ್‌ಗಳನ್ನು ಉಳಿಸಿ ಹೋರಾಟ ಸಮಿತಿಯ ವತಿಯಿಂದ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಸಿಬಿಒಒ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೋಗೊ ಮತ್ತು ಕರಪತ್ರ ಅನಾವರಣ ಸಭೆಯಲ್ಲಿ ಅವರು ಮಾತನಾಡಿದರು.

ಬ್ಯಾಂಕ್‌ ವಿಲೀನದಿಂದಾಗಿ ಕರಾವಳಿಯಲ್ಲಿ ಉದ್ಯೋಗಾವಕಾಶ ಕುಸಿಯಬಹುದು. ಕರಾವಳಿಯಲ್ಲಿ ಹುಟ್ಟಿದ ಬ್ಯಾಂಕ್‌ಗಳು ಸಮಾಜದ ಬೆಳವಣಿಗೆಗೆ ಕೊಡುಗೆ ನೀಡಿವೆ. ಉದ್ಯೋಗ ಸೃಷ್ಟಿಯ ಜತೆಗೆ ಜನರ ಜೀವನ ಮಟ್ಟ ಸುಧಾರಿಸಿದೆ. ಬ್ಯಾಂಕ್‌ ವಿಲೀನವು ಕರಾವಳಿಯ ಭೌಗೋಳಿಕ ಪ್ರದೇಶಕ್ಕೆ ತಕ್ಕುದಲ್ಲ ಎಂದು ತಿಳಿಸಿದರು.

ಅಸ್ತಿತ್ವ ನಾಶ ಭೀತಿ
ಅಖೀಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟದ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್‌. ಭಟ್‌ ಮಾತನಾಡಿ, ಮತ್ಸೋÂದ್ಯಮ, ಬೋಟ್‌ ಉದ್ಯಮ ಪ್ರಗತಿಗೆ ಕರಾವಳಿ ಮೂಲದ ಬ್ಯಾಂಕ್‌ಗಳು ಕಾರಣ. ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕಾರಣವಾದ ಕರಾವಳಿಯ ಬ್ಯಾಂಕ್‌ಗಳು ಇದೀಗ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಬ್ಯಾಂಕ್‌ ದೊಡ್ಡದಾದಷ್ಟು ಅದರ ದಕ್ಷತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದ್ದು, ಇದು ಸುಳ್ಳು. ಹೀಗಾಗಿದ್ದರೆ ಸ್ಟೇಟ್‌ ಬ್ಯಾಂಕ್‌ ಯಾಕೆ ನಷ್ಟದ ಹಾದಿಯಲ್ಲಿದೆ ಎಂದು ಪ್ರಶ್ನಿಸಿದರು.

ಕರಾವಳಿ ಬ್ಯಾಂಕ್‌ಗಳ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ದಿನೇಶ್‌ ಹೆಗ್ಡೆ ಉಳೆಪಾಡಿ ಮಾತನಾಡಿ, ಕರಾವಳಿ ಬ್ಯಾಂಕ್‌ಗಳ ತೊಟ್ಟಿಲು. ದೇಶದ ಆರ್ಥಿಕತೆಗೆ ಬಹಳಷ್ಟು ಕೊಡುಗೆ ನೀಡಿದೆ. ವಿಲೀನದ ಬಗ್ಗೆ ಯಾವುದೇ ಬ್ಯಾಂಕ್‌ ನಿರ್ಧಾರ ಕೈಗೊಂಡರೆ ಸಾಲುವುದಿಲ್ಲ. ಕ್ಯಾಬಿನೆಟ್‌ನಲ್ಲಿ ನಿರ್ಧಾರವಾಗಿ ಬಳಿಕ ನೋಟಿಫಿಕೇಶನ್‌ ಆಗಬೇಕು. ಆದರೆ ಇನ್ನೂ ಆಗಿಲ್ಲ ಎಂದರು.

Advertisement

ಹೋರಾಟದ ಎಚ್ಚರಿಕೆ
ನರಸಿಂಹನ್‌ ಕಮಿಟಿಯಲ್ಲಿ ಬ್ಯಾಂಕ್‌ ವಿಲೀನದ ಪ್ರಸ್ತಾವವಿದ್ದು, ಬ್ಯಾಂಕ್‌ ನಷ್ಟಕ್ಕೆ ತಲುಪಿದರೆ ಅದರ ಪುನಶ್ಚೇತನಕ್ಕೆ ಪೂರಕ್ಕೆ ವಾತಾವರಣ ಕಲ್ಪಿಸಬೇಕು ಎಂದಿದೆ. ಬದಲಾಗಿ ವಿಲೀನ ಮಾಡಬೇಕೆಂದಿಲ್ಲ. ಮುಂದಿನ ದಿನಗಳಲ್ಲಿ ಕರಾವಳಿಯ ತಾಲೂಕು, ಹೋಬಳಿ ಮಟ್ಟದಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ವಿವರಿಸಿದರು.

ಲಾಂಛನವನ್ನು ಶ್ರೀ ವಿಶ್ವಪ್ರಸನ್ನತೀರ್ಥರು ಅನಾವರಣ ಗೊಳಿಸಿದರು. ಪ್ರತಿಭಟನೆಯ ಕರಪತ್ರವನ್ನು ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ವಿಜಯ್‌ ವಿಕ್ಟರ್‌ ಲೋಬೊ ಬಿಡುಗಡೆಗೊಳಿಸಿದರು. ಮನವಿ ಪತ್ರವನ್ನು ಟಿ.ಆರ್‌. ಭಟ್‌, ಪ್ರತಿಭಟನೆಯ ಸ್ಟಿಕ್ಕರ್‌ ಅನ್ನು ಮಾಜಿ ಸಚಿವ ಸುಬ್ಬಯ್ಯ ಸುಬ್ಬಯ್ಯ ಶೆಟ್ಟಿ ಬಿಡುಗಡೆಗೊಳಿಸಿದರು.ಕಾರ್ಮಿಕ ಮುಖಂಡ ಮುನೀರ್‌ ಕಾಟಿಪಳ್ಳ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next