Advertisement
ಡೆಬಿಟ್ ಕಾರ್ಡ್ ರಹಿತ ಈ ನಗದು ಪಡೆದುಕೊಳ್ಳುವಿಕೆ ಸೇವೆಯು ಗ್ರಾಹಕರ ಗುರುತಿನ ಪತ್ತೆಗಾಗಿ ಡೆಬಿಟ್ ಕಾರ್ಡ್ ಅವಲಂಬಿಸುವ ವಿಧಾನಕ್ಕಿಂತ ಹೊರತಾಗಿರುತ್ತದೆ. ಇಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಎಟಿಎಂ ಬಳಕೆದಾರರಲ್ಲಿ ಆ್ಯಂಡ್ರಾಯ್ಡ್ ಅಥವಾ ಐ.ಒ.ಎಸ್. ಹ್ಯಾಂಡ್ ಸೆಟ್ ಗಳಿರುವುದು ಅಗತ್ಯವಾಗಿರುತ್ತದೆ.
Related Articles
Advertisement
– ‘ಐ ಮೊಬೈಲ್’ ಆ್ಯಪ್ ಗೆ ಲಾಗಿನ್ ಆಗಿ ಮತ್ತು ಅಲ್ಲಿ ‘ಸರ್ವಿಸಸ್’ ಹಾಗೂ ‘ಕ್ಯಾಶ್ ವಿದ್ರಾವಲ್ ಅಟ್ ಐ.ಸಿ.ಐ.ಸಿ.ಐ. ಬ್ಯಾಂಕ್ ಎಟಿಎಂ’ ಆಯ್ಕೆಗಳಿಗೆ ಕ್ಲಿಕ್ ಮಾಡಿ.
– ನೀವು ತೆಗೆಯಬಯಸುವ ಮೊತ್ತವನ್ನು ನಮೂದಿಸಿ ಹಾಗೂ ನಿಮ್ಮ ಅಕೌಂಟ್ ನಂಬರನ್ನು ಆಯ್ಕೆ ಮಾಡಿ. 4 ಸಂಖ್ಯೆಗಳ ತಾತ್ಕಾಲಿಕ ಪಿನ್ ನಂಬರನ್ನು ನೀಡಿ.
– ತಕ್ಷಣವೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ರೆಫೆರೆನ್ಸ್ ಒಟಿಪಿ ಬರುತ್ತದೆ.
– ಇದೀಗ ಹತ್ತಿರದಲ್ಲಿರುವ ಐ.ಸಿ.ಐ.ಸಿ.ಐ. ಬ್ಯಾಂಕಿನ ಎಟಿಎಂಗೆ ಹೋಗಿ ಅಲ್ಲಿ ‘ಕಾರ್ಡ್ ಲೆಸ್ ಕ್ಯಾಶ್ ವಿದ್ರಾವಲ್’. ಬಳಿಕ ‘ಎಂಟರ್ ಮೊಬೈಲ್ ನಂಬರ್’ ಆಯ್ಕೆಗೆ ಕ್ಲಿಕ್ ಮಾಡಿ ಬಳಿಕ ‘ರೆಫೆರೆನ್ಸ್ ಒಟಿಪಿ ನಂಬರ್’ ಆಯ್ಕೆಮಾಡಿಕೊಳ್ಳಿ. ಇದೀಗ ನಿಮಗೆ ಈ ಮೊದಲೇ ಬಂದಿದ್ದ ತಾತ್ಕಾಲಿಕ ಪಿನ್ ನಂಬರನ್ನು ಇಲ್ಲಿ ದಾಖಲಿಸಿ ನೀವು ತೆಗೆಯಬಯಸುವ ಮೊತ್ತವನ್ನು ಅಲ್ಲಿ ನಮೂದಿಸಿ.
ನೀವು ನಮೂದಿಸಿದ ಹಿಂಪಡೆಯುವ ಮೊತ್ತ ಮತ್ತು ಒಟಿಪಿ ಸಂಖ್ಯೆ ಮುಂದಿನ ದಿನದ ಮಧ್ಯರಾತ್ರಿವರೆಗೆ ಚಾಲ್ತಿಯಲ್ಲಿರುತ್ತದೆ. ಹಾಗಾಗಿ ಯಾವುದೇ ಐಸಿಐಸಿಐ ಬ್ಯಾಂಕಿನ ಎಟಿಎಂ ಬಳಿಯೇ ಇದ್ದು ನೀವು ಈ ಮೇಲ್ಕಾಣಿಸಿದ ವಿಧಾನಗಳನ್ನು ಮಾಡುತ್ತಾ ಕುಳಿತುಕೊಳ್ಳಬೇಕಾಗಿರುವುದಿಲ್ಲ. ಆದರೆ ಈ ಸೇವೆಗಳ ಲಭ್ಯತೆ ನಿಮ್ಮ ಪ್ರದೇಶದಲ್ಲಿ ಸಿಗುವ ಇಂಟರ್ನೆಟ್ ವೇಗ ಹಾಗೂ ನೆಟ್ವರ್ಕ್ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ.
ಈ ಡೆಬಿಟ್ ಕಾರ್ಡ್ ರಹಿತ ಎಟಿಎಂ ಹಣ ತೆಗೆಯುವ ಸೌಲಭ್ಯವನ್ನು ಭಾರತದಲ್ಲಿ ಮೊದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ‘ಯೋನೋ’ ಸೇವೆಗಳ ಮೂಲಕ ಪರಿಚಯಿಸಿತ್ತು.