Advertisement
ನೀವು ವಿದೇಶ ಪ್ರಯಾಣ ಕೈಗೊಳ್ಳುತ್ತೀರಾ? ಪಾಸ್‌ಪೋರ್ಟ್/ ವೀಸಾ ಕಾರ್ಡ್ ರೆಡಿ ಮಾಡಿದ್ದೀರಾ? ಎಲ್ಲವೂ ರೆಡಿ ಎಂದ ಮೇಲೆ ಅಲ್ಲಿನ ಖರ್ಚಿಗೆ ಹಾಗೂ ಇತರ ಬಳಕೆಗಾಗಿ ಬ್ಯಾಂಕ್ ಸಂಬಂಧಿತ ವಿವಿಧ ಕಾರ್ಡ್‌ಗಳನ್ನು ಕೂಡ ರೆಡಿ ಮಾಡಿದ್ದೀರಾ ಎಂಬುದನ್ನು ಪರಿಶೀಲಿಸುವುದು ಒಳಿತು. ಅಲ್ಲದೇ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಬ್ಯಾಂಕ್ ಗಳು ಗ್ರಾಹಕರಿಗೆ ನೀಡುವ ವಿವಿಧ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆಯುವುದು ಉತ್ತಮ.
ಬ್ಯಾಂಕ್ ಗಳು ವಿದೇಶಕ್ಕೆ ಪ್ರಯಾಣ ಮಾಡುವವರಿಗಾಗಿ ಕೆಲವೊಂದು ಕಾರ್ಡ್‌ಗಳನ್ನು ನೀಡುತ್ತವೆ. ಇವುಗಳ ಬಗ್ಗೆ ಮೊದಲು ನೀವು ನಿಮ್ಮ ಬ್ಯಾಂಕ್‌ಗಳಲ್ಲಿ ತಿಳಿದುಕೊಳ್ಳುವುದು ಉತ್ತಮ. ಯಾಕೆಂದರೆ ವಿದೇಶಕ್ಕೆ ಹೋದ ಬಳಿಕ ತಬ್ಬಿಬ್ಟಾಗಬಾರದು. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಗಿಫ್ಟ್ ಕರೆನ್ಸಿ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ನೀಡುತ್ತವೆ. ಇದರಲ್ಲಿ ಡೆಬಿಟ್ ಕಾರ್ಡ್ ವಿದೇಶದಲ್ಲಿ ಅಧಿಕವಾಗಿ ಬಳಕೆಯಾಗುವುದಿಲ್ಲ. ಆದರೆ ಕ್ರೆಡಿಟ್ ಕಾರ್ಡ್ ಮಾತ್ರ ಮುಖ್ಯವಾಗಿ ಬಳಸಬಹುದಾಗಿದೆ.
Related Articles
Advertisement
ಇನ್ನು, ವಿಮಾನದ ಮೂಲಕ ಹೊರದೇಶಕ್ಕೆ ಹೋದಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿಯೇ ವಿದೇಶಿ ವಿನಿಮಯ ಕೇಂದ್ರವಿರುತ್ತದೆ. ಅಲ್ಲಿ ನಮ್ಮಲ್ಲಿರುವ ಹಣವನ್ನು ನೀಡಿ ಆ ದೇಶದ ಕರೆನ್ಸಿ ಕೂಡ ಪಡೆದುಕೊಳ್ಳಬಹುದು. ವಿದೇಶಕ್ಕೆ ಉದ್ಯೋಗ, ಶಿಕ್ಷಣ, ಪ್ರವಾಸಕ್ಕಾಗಿ ಹೊರಡುವ ಯೋಜನೆಯಿದೆಯೇ? ಪಾಸ್ ಪೋರ್ಟ್, ವೀಸಾ ಎಲ್ಲವೂ ರೆಡಿಯಾದ ಮೇಲೆ ಅಲ್ಲಿ ಬಳಸಬಹುದಾದ ಕರೆನ್ಸಿ, ಕಾರ್ಡ್‌ಗಳ ಬಗ್ಗೆ ಮೊದಲೇ ತಿಳಿದುಕೊಂಡಿರುವುದು ಬಹು ಮುಖ್ಯ. ಅಲ್ಲದೇ ಬ್ಯಾಂಕ್ ಗಳು ನಿಮಗೆ ನೀಡುವ ವಿಶೇಷ ಸೌಲಭ್ಯಗಳನ್ನು ಅರಿತಿದ್ದರೆ ವಿದೇಶದಲ್ಲಿ ಹಣಕಾಸು ವ್ಯವಹಾರ ಸುಲಭವಾಗಬಹುದು. ಯಾವುದೇ ಟೆನ್ಶನ್ ಇಲ್ಲದೆ ವಿದೇಶದಲ್ಲಿದ್ದು ಬರಬಹುದು. ವ್ಯವಹಾರ ಸುಲಭವಾಗಬಹುದು. ಯಾವುದೇ ಟೆನ್ಶನ್ ಇಲ್ಲದೆ ವಿದೇಶದಲ್ಲಿದ್ದು ಬರಬಹುದು.
ವಿದೇಶದಲ್ಲಿ ಮಾಸ್ಟರ್ ಕಾರ್ಡ್ ಬಳಕೆಯಲ್ಲಿದ್ದರೂ, ಇದನ್ನು ಬಳಸುವಾಗ ಕೆಲವರು ಹಿಂಜರಿಯುತ್ತಾರೆ. ಯಾಕೆಂದರೆ ಅಲ್ಲಿನ ಆದಾಯ ತೆರಿಗೆ ಇಲಾಖೆಗಳು ಈ ಕಾರ್ಡ್‌ದಾರರ ಮೇಲೆ ಕಣ್ಣಿಟ್ಟಿರುತ್ತವೆ.
ಮಲ್ಟಿ ಕರೆನ್ಸಿ ಕಾರ್ಡ್ಈ ಮಧ್ಯೆ ಮಲ್ಟಿ ಕರೆನ್ಸಿ ಕಾರ್ಡ್ ಕೂಡ ಬಳಕೆಯಲ್ಲಿದೆ. ಇದನ್ನು ಕ್ರೆಡಿಟ್ ಕಾರ್ಡ್ ನಂತೆಯೇ ಬಳಸಿಕೊಂಡು ಪ್ರವಾಸಿಗರು ಯಾವುದೇ ವಸ್ತುಗಳನ್ನು ಖರೀದಿ ಮಾಡಬಹುದು. ಈ ಕಾರ್ಡ್‌ಗಳನ್ನು ಎಟಿಎಂಗಳಲ್ಲೂ ಬಳಸಬಹುದು. ಇದು ವಾಸ್ತವವಾಗಿ ಪ್ರೀಪೈಯ್ಡ ಕಾರ್ಡ್, ಡಾಲರ್, ಯೂರೋ, ಪೌಂಡ್ ಅಥವಾ ಆಯಾ ದೇಶದ ಸ್ಥಳೀಯ ಕರೆನ್ಸಿಗಳನ್ನೂ ಇದಕ್ಕೆ ಲೋಡ್ ಮಾಡಬಹುದು. ವಿದೇಶ ಪ್ರಯಾಣದ ವೇಳೆ ಪ್ರಯಾಣಿಕರು ಅನುಭವಿಸುವ ದೊಡ್ಡ ಸಮಸ್ಯೆ ವಿದೇಶಿ ಕರೆನ್ಸಿ ವಿನಿಮಯದ್ದು. ಮಲ್ಟಿ ಕರೆನ್ಸಿ ಕಾರ್ಡ್‌ನಿಂದ ಈ ಸಮಸ್ಯೆಗೆ ಮುಕ್ತಿ ನೀಡಬಹುದು ಎನ್ನುವುದು ಅನಿವಾಸಿ ಭಾರತೀಯರೊಬ್ಬರ ಅಭಿಪ್ರಾಯ. ಈ ಕಾರ್ಡ್ ಅನ್ನು ವಿಶ್ವದ ಯಾವುದೇ ದೇಶದಲ್ಲೂ ಯಾವುದೇ ಸಮಸ್ಯೆ ಇಲ್ಲದೆ ಬಳಸಬಹುದು. ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳಂತೆ ಈ ಕಾರ್ಡ್‌ನ ವಾರ್ಷಿಕ ಶುಲ್ಕವೂ ದುಬಾರಿಯಾಗಿಲ್ಲ. ಕ್ರೆಡಿಟ್ ಕಾರ್ಡ್‌ಗಳಂತೆ ಈ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡುವ ಖರೀದಿಗೆ ವರ್ಗಾವಣೆ ಶುಲ್ಕ ವಿಧಿಸುವುದಿಲ್ಲ. ಪ್ರವಾಸಿಗರಿಗೆ ಟ್ರಾವೆಲರ್ ಚೆಕ್‌ಗಳಿಂದ ಸಾಕಷ್ಟು ಉಪಯೋಗಗಳಿದ್ದರೂ, ಅವುಗಳನ್ನು ಎಲ್ಲ ಕಡೆ ಸ್ವೀಕರಿಸುವುದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ಮಲ್ಟಿ ಕರೆನ್ಸಿ ಕಾರ್ಡ್‌ಗಳು ಇದ್ದರೆ ಅಂತಹ ಸಮಸ್ಯೆಗಳಿಲ್ಲ. ಯಾವುದೇ ದೇಶಕ್ಕೆ ಹೋದರೂ ಆ ದೇಶದ ಸ್ಥಳೀಯ ಕರೆನ್ಸಿಯಲ್ಲಿ ಹಣ ತೆಗೆದುಕೊಳ್ಳಬಹುದು. ಹೊಟೇಲ್, ವಿಮಾನ, ವಾಹನ ಬಾಡಿಗೆ, ಮನೋರಂಜನಾ ಉದ್ದೇಶ ಹೀಗೆ ಎಲ್ಲ ಕೇಂದ್ರಗಳಲ್ಲೂ ಈ ಕಾರ್ಡ್ ಬಳಕೆಯಾಗುತ್ತದೆ. ವಿಮಾನದ ಮೂಲಕ ವಿದೇಶಗಳಿಗೆ ಪ್ರಯಾಣ ಮಾಡುವ ಭಾರತೀಯರು ಇನ್ನು ಮುಂದೆ ನಿರ್ಗಮನ ಕಾರ್ಡ್‌ಗಳನ್ನು ಭರ್ತಿ ಮಾಡಬೇಕಿಲ್ಲ ಎಂದು 2017ರ ಜುಲೈ 1ರಿಂದ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಆದರೆ, ಹಡಗು, ಭೂ ಮಾರ್ಗದ ಮೂಲಕ ಪ್ರಯಾಣಿಸುವವರಿಗೆ ಈ ಕ್ರಮ ಅನ್ವಯವಾಗುವುದಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ, ತಾವು ವಿದೇಶಕ್ಕೆ ಹೋಗುವವರಿದ್ದರೆ ಅಲ್ಲಿನ ಕರೆನ್ಸಿ ಹಾಗೂ ಇಲ್ಲಿನ ರೂಪಾಯಿ ಮೌಲ್ಯವನ್ನು ಮೊದಲು ತಿಳಿದುಕೊಳ್ಳಬೇಕು ಹಾಗೂ ಆ ದೇಶದಲ್ಲಿ ಯಾವ ಕಾರ್ಡ್ ಬಳಕೆಯಾಗಬಹುದು ಎಂಬುದನ್ನು ಸಂಬಂಧಪಟ್ಟ ಬ್ಯಾಂಕ್ ಅಥವಾ ಅನಿವಾಸಿ ಭಾರತೀಯರಲ್ಲಿ ವಿಚಾರಿಸಬೇಕು. ಜತೆಗೆ ಈ ಕುರಿತಂತೆ ಪಾಲಿಸಬೇಕಾದ ನಿಯಮಗಳನ್ನು ಅಭ್ಯಸಿಸಿ ಕಾರ್ಡ್ ಬಳಕೆಗೆ ಮುಂದಾಗಬೇಕು. ದಿನೇಶ್ ಇರಾ