Advertisement
ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡುವುದು ಒಂದು ಉತ್ತಮ ಆಯ್ಕೆಯಾಗಿದೆ. ಇದು ಸರಾಸರಿ ಶೇಕಡಾ. 3 ರಷ್ಟು ಆದಾಯವನ್ನು ಗಳಿಸಬಹುದು. ಸೆಕ್ಷನ್ 80 ಟಿಟಿಎ ಅಡಿಯಲ್ಲಿ ಆದಾಯ ತೆರಿಗೆ ಕಡಿತಕ್ಕೆ 10,000 ವರೆಗಿನ ಬಡ್ಡಿ ಆದಾಯ ಲಭ್ಯವಿದೆ.
Related Articles
Advertisement
ಲಿಕ್ವಿಡ್ ಫಂಡ್ ಸಹ ಒಂದು ಅಲ್ಪ ಅವಧಿಯಲ್ಲಿ ಹಣ ಹೂಡಲು ಒಂದು ಉತ್ತಮ ಆಯ್ಕೆಯಾಗಿದೆ, ಆದರೆ ಆದಾಯವು ಎಫ್ ಡಿಗಳಿಗೆ ಸಮನಾಗಿರುತ್ತದೆ – ವ್ಯಾಲ್ಯೂ ರಿಸರ್ಚ್ ನ ಮಾಹಿತಿಯ ಪ್ರಕಾರ, ಲಿಕ್ವಿಡ್ ಫಂಡ್ ನ ಸರಾಸರಿ ಆದಾಯವು ಶೇಕಡಾ. 3.65 ಆಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹೂಡಿಕೆ ಮಾಡಿದರೆ, ನೀವು ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಯೋಜಿಸಿದರೆ ಉಳಿತಾಯ ನಿಧಿಗಳು ತೆರಿಗೆ ಸಮರ್ಥವಾಗಿರುವುದಿಲ್ಲ.
ಅಲ್ಪಾವಧಿಗೆ ಹಣವನ್ನು ಠೇವಣಿ ಮಾಡಲು ಬಯಸುವ ಯಾವ ಆಯ್ಕೆಯು ಉತ್ತಮ ..?
“ಮೊತ್ತವು 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆ ಹಣವನ್ನು ಅಲ್ಪಾವಧಿಯ ಮ್ಯೂಚುವಲ್ ಫಂಡ್ ಗಳಲ್ಲಿ ಇಡುವುದು ಉತ್ತಮ ಆಯ್ಕೆಯಾಗಿದೆ” ಎಂದು ಅಹಮದಾಬಾದ್ ಮೂಲದ ಫೈನಾನ್ಶಿಯಲಗ ಲಿಟರೆಸಿ ಇನಿಶಿಯೆಟಿವ್ ಮನಿಡೂಸ್ಕೂಲ್ ಸಂಸ್ಥಾಪಕ ಅರ್ನವ್ ಪಾಂಡ್ಯ ಹೇಳುತ್ತಾರೆ.
ಅಲ್ಟ್ರಾಅಲ್ಪಾವಧಿಯ ನಿಧಿಗಳು 3 ರಿಂದ 6 ತಿಂಗಳ ಪೋರ್ಟ್ಫೋಲಿಯೋ ಮೆಜ್ಯುರಿಟಿಯನ್ನು ನಿರ್ವಹಣೆ ಮಾಡುತ್ತದೆ. ಅಲ್ಟ್ರಾ- ಅಲ್ಪಾವಧಿಯ ನಿಧಿಗಳ ಸರಾಸರಿ ಆದಾಯವು ಕಳೆದ ಒಂದು ವರ್ಷದಲ್ಲಿ ಶೇಕಡಾ. 5.35 ಆಗಿದೆ. ಸಿಗ್ನಿಫಿಕೆಂಟ್ ಮೊತ್ತಕ್ಕೆ, ಶೇಕಡಾ 2 ರಿಂದ 2.5 ಆದಾಯವು ವ್ಯತ್ಯಾಸವನ್ನುಂಟು ಮಾಡುತ್ತದೆ” ಎನ್ನುತ್ತಾರೆ ಪಾಂಡ್ಯ.
ಒಬ್ಬ ವ್ಯಕ್ತಿಯು ಮೂರು ತಿಂಗಳವರೆಗೆ 5 ಲಕ್ಷ ಹೂಡಿಕೆ ಮಾಡಲು ಬಯಸುತ್ತಾನೆ ಎಂದು ಕಲ್ಪಿಸಿಕೊಂಡರೆ, ಶೇಕಡಾ 5.35 ರಲ್ಲಿ, ಆದಾಯವು ಸುಮಾರು 6,688 ರೂ. ಆಗಿರುತ್ತದೆ. ಎಫ್ ಡಿ ಯಲ್ಲಿ ಶೇಕಡಾ 3.5 ರಲ್ಲಿ, ಆದಾಯವು 4,375 ರೂ. ಆಗಿರುತ್ತದೆ. ಸುಮಾರು 2,313 ರೂ ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದಾಗಿದೆ.
ಓದಿ :ದರ್ಶನ್-ಸುದೀಪ್ ಒಂದಾಗಬೇಕು: ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಯಾನ