ಕಲಬುರಗಿ: ಬಂಜಾರ ಮಹಿಳೆಯರು ಇತರೆಲ್ಲ ಮಹಿಳೆಯರಿಗಿಂತ ಸಂಘರ್ಷಮಯವಾದ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಲಗೊಂಡು ಸ್ವಾವಲಂಬಿಗಳಾಗಬೇಕು ಎಂದು ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ ಹೇಳಿದರು.
ನಗರದ ಗೋದುತಾಯಿ ಬಡಾವಣೆಯಲ್ಲಿರುವ ಶಿವ ಮಂದಿರದಲ್ಲಿ ರವಿವಾರ ನೂತನವಾಗಿ ಅಸ್ತಿತ್ವಕ್ಕೆ ಬಂದ ಬಂಜಾರಾ ಮಹಿಳಾ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಸ್ವತಂತ್ರ ಪಡೆದು 70 ವರ್ಷದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಂಜಾರಾ ಮಹಿಳಾ ಪತ್ತಿನ ಸಹಕಾರ ಸಂಘ ಆರಂಭವಾಗಿದೆ.
ಇದು ಹಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೊಡ, ಪರ್ವತಲಿಂಗ ಪರಮೇಶ್ವರ ಮಹಾರಾಜರು, ಜೇಮಸಿಂಗ್ ಮಹಾರಾಜರು, ಸಿದ್ದಲಿಂಗ ಮಹಾಸ್ವಾಮಿಗಳು, ಮುರಾರಿ ಮಹಾರಾಜರು, ಬಂಜಾರಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಡಾ| ಶಾರದಾ ಭೀಮರಾವ ಯಾಕಾಪುರ ಮಾತನಾಡಿದರು.
ಪಾಲಿಕೆ ಸದಸ್ಯ ವಿಠಲ ಜಾಧವ, ಅರವಿಂದ ವಿಜಯಕುಮಾರ ಚವ್ಹಾಣ, ಬಂಜಾರಾ ಮಹಿಳಾ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಗಾಯಿತ್ರಿ ಉಮೇಶ ಜಾಧವ, ನಿರ್ದೇಶಕರಾದ ಪಾರ್ವತಿಬಾಯಿ ಶಂಕರ ಚವ್ಹಾಣ, ಸೇವಂತಾ ಪ್ರೇಮಸಿಂಗ ಚವ್ಹಾಣ, ದಾನಮ್ಮ ತಾರಾಸಿಂಗ್ ಚವ್ಹಾಣ, ಕವಿತಾ ಅರುಣ ಪವಾರ, ಕಮಲಾಬಾಯಿ ಚಂದ್ರಶೇಖರ ಪವಾರ,
ರುಕ್ಮಿಣಿ ಲಾಲಪ್ಪ ರಾಠೊಡ, ಸುನೀತಾ ಕಿಶನಕುಮಾರ ಚವ್ಹಾಣ, ಜಯಶ್ರೀ ರಮೇಶ ರಾಠೊಡ, ವಿಜಯಲಕ್ಷಿ ರಾಮಚಂದ್ರ ಜಾಧವ, ಸುಶೀಲಾ ಹರಿಹರ ಪವಾರ ಇದ್ದರು. ತಾರಾನಾಥ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾ ಪೂರ್ಣಸಿಂಗ್ ರಾಠೊಡ ಸ್ವಾಗತಿಸಿದರು. ಸೇವಂತಾ ಪ್ರೇಮಸಿಂಗ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು.